December 17, 2025

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ (ನಿ) ವಿಟ್ಲ ಶಾಖೆಯ ಗ್ರಾಹಕ ಸಂಪರ್ಕ ಸಭೆ

0
image_editor_output_image-172339397-1763744991502

ವಿಟ್ಲ: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ (ನಿ) ವಿಟ್ಲ ಶಾಖೆಯ ಗ್ರಾಹಕ ಸಂಪರ್ಕ ಸಭೆಯು 20 ನವೆಂಬರ್ 2025 ರಂದು ವಿಟ್ಲ ಶಾಖೆಯಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಲ. ಎ ಸುರೇಶ್ ರೈ ಯವರು ಮಾತನಾಡಿ, ಸಂಘದ  ಬೆಳವಣಿಗೆಗೆ ಗ್ರಾಹಕರ ಉತ್ತಮ ಸಲಹೆಗಳು ಬಹಳ ಅಗತ್ಯ. ಈ ನಿಟ್ಟಿನಲ್ಲಿ ನಾವು ಸಂಪರ್ಕ ಸಭೆಯನ್ನು ಆಯೋಜಿಸಿದ್ದೇವೆ. ಸಂಘದಲ್ಲಿ ಬ್ಯಾಂಕಿಂಗ್ ತತ್ವವನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆಯನ್ನು ನಮ್ಮ ಸಿಬ್ಬಂದಿಗಳು ನೀಡುತ್ತಿದ್ದಾರೆ. ಸಾಲ ನೀಡುವಂತಹ ಸಂದರ್ಭದಲ್ಲಿ ಅವರು ಕಟ್ಟುವ ಸಾಮರ್ಥ್ಯವನ್ನು ಪರಿಗಣಿಸಿ Cibill ನ್ನು ನೋಡಿಕೊಂಡು ಸಾಲ ನೀಡುತ್ತಿದ್ದೇವೆ. ಪ್ರತೀ ತಿಂಗಳು ಸಿಬ್ಬಂದಿಗಳ ಸಭೆಯನ್ನು ಕರೆದು ಶಾಖಾವಾರು ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇವೆ. ಸಂಘ ಬೆಳವಣಿಗೆಗೆ ಸಹಕರಿಸಿದ ಎಲ್ಲಾ ಗ್ರಾಹಕ ಬಂಧುಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ಸಭೆಯಲ್ಲಿ ಶಾಖಾ ಉಸ್ತುವಾರಿ ನಿರ್ದೇಶಕರಾದ ಶ್ರೀ ಗಣಪತಿ ಭಟ್ ಸೇರಾಜೆ, ನಿರ್ದೇಶಕರುಗಳಾದ ಶ್ರೀ ದೇವಪ್ಪ ನಾಯ್ಕ, ಶ್ರೀ ಜಯಪ್ರಕಾಶ್ ನೂಜಿಬೈಲು ಹಾಗೂ ಶ್ರೀ ಅಶೋಕ್ ಕುಮಾರ್ ಬಿಸಿರೋಡ್, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಂಪರ್ಕಾಧಿಕಾರಿ ಶ್ರೀ ಮಾತೇಶ್ ಭಂಡಾರಿ ಉಪಸ್ಥಿತರಿದ್ದರು. ಶಾಖಾಧಿಕಾರಿಯಾದ ಶ್ರೀಮತಿ ರಾಜೀವಿಯವರು ಪ್ರಾಸ್ತಾವಿಕ ಮಾತನಾಡಿ ಶಾಖೆಯ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ಗ್ರಾಹಕ ಬಂಧುಗಳಿಗೆ ಅಭಿನಂದಿಸುತ್ತಾ ಶಾಖೆಯ ಪ್ರಗತಿಯ ಪಕ್ಷಿನೋಟವನ್ನು ನೀಡಿ ಸಭೆಗೆ ಎಲ್ಲರನ್ನು ಸ್ವಾಗತಿಸಿದರು.

ಸಂಘದ ಸದಸ್ಯರಾದ ಶ್ರೀ ಸುರೇಶ್ ಬನಾರಿ, ಶ್ರೀ ಸೀತಾರಾಮ ಶೆಟ್ಟಿ ಒಕ್ಕೆತ್ತೂರು, ಶ್ರೀ ಚಂದ್ರಶೇಖರ ರೈ ಮುಡಿಮಾರು, ಶ್ರೀ ನಾರಾಯಣ ಬಳ್ಳಾಲ್ ರವರು ಉತ್ತಮ ಅನಿಸಿಕೆ ಹಾಗೂ ಸಲಹೆಗಳನ್ನು ನೀಡಿದರು. ಯೋಜನೆಯ ಮೇಲ್ವಿಚಾರಕಿ ಶ್ರೀ ಮತಿ ಲೀಲಾ, ಸಂಯೋಜಕರು ಮತ್ತು ಸೇವಾಧೀಕ್ಷಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಶಾಖೆಯ ಸಿಬ್ಬಂದಿಗಳಾದ ಶ್ರೀಮತಿ ವನಿತಾ ಮತ್ತು ಕುಮಾರಿ ಶ್ರದ್ಧಾ. ಜೆ. ಶೆಟ್ಟಿ ಯವರು ಪ್ರಾರ್ಥನೆ ಮಾಡಿದರು. ಕಾರ್ಯಕ್ರಮವನ್ನು ಸಿಬ್ಬಂದಿಯಾದ ಶ್ರೀಮತಿ ನವ್ಯಾ ಎಸ್ ರವರು ಕಾರ್ಯಕ್ರಮ ನಿರೂಪಿದರು. ಶ್ರೀಮತಿ ಸ್ವಾತಿ ಇವರು ಧನ್ಯವಾದವನ್ನು ಸಮರ್ಪಿಸಿದರು. ಕೇಂದ್ರ ಕಛೇರಿಯ ಸಿಬ್ಬಂದಿಯಾದ ಶ್ರೀ ಗಿರೀಶ್ ಹಾಗೂ ಶಾಖೆಯ ಸಿಬ್ಬಂದಿಯಾದ ಶ್ರೀಹರಿ ರವರು ಕಾರ್ಯಕ್ರಮಕ್ಕೆ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!