December 17, 2025

ಅಪಘಾತದಲ್ಲಿ ಮರಣ ಹೊಂದಿದ ಮೂವರು ಕುಟುಂಬಕ್ಕೆ ಗರಿಷ್ಠ ಪ್ರಮಾಣದಲ್ಲಿ ಸಹಾಯ ನೀಡಲು ಸರಕಾರಕ್ಕೆ ಸ್ಪೀಕರ್ ಮೂಲಕ ದೀವಾನ್ -ಇ -ಖಾಝಿ ಸುನ್ನಿ ಸಂಯುಕ್ತ ಜಮಾತ್ ಕರ್ನಾಟಕ ಮನವಿ

0
image_editor_output_image1022795601-1763483694636

ಮಂಗಳೂರು: ಮೊಂಟೆಪದವು ನಿವಾಸಿಗಳಾಗಿದ್ದ ಮರಿಕ್ಕಳ ಜಮಾಅತಿಗೆ ಒಳಪಟ್ಟ ಸುನ್ನೀ ಕಾರ್ಯಕರ್ತರಾದ ಇಬ್ರಾಹಿಮ್ ಬಟ್ಯಡ್ಕ, ಅಟೋ ಚಾಲಕ ಮನ್ಸೂರ್ ಮರಿಕ್ಕಳ, ಅಬೂಬಕ್ಕರ್ ಮೊಂಟೆಪದವು ಅವರು ಇತ್ತೀಚೆಗೆ ಮಂಗಳೂರಿನ ಪಣಂಬೂರಿನಲ್ಲಿ ನಡೆದ ಅಪಘಾತದಲ್ಲಿ ಮರಣ ಹೊಂದಿದ್ದು, ಆ ಕುಟುಂಬದ ಮನೆಗೆ ಸುನ್ನೀ ಸಂಯುಕ್ತ ಜಮಾಅತ್ ಕರ್ನಾಟಕ ಇದರ ನಾಯಕರು ಭೇಟಿ ನೀಡಿ ಸಾಂತ್ವನ ಹೇಳುವ ಮೂಲಕ ವಿಷೇಶ ಪ್ರಾರ್ಥನೆ ನಡೆಸಿದ್ದಾರೆ.


ಅದಾದ ಬಳಿಕ ದಿನಾಂಕ 18.11.2025 ಮಂಗಳವಾರ ಬೆಳಿಗ್ಗೆ ದೀವಾನ್ -ಇ -ಖಾಝಿ ಸುನ್ನಿ ಸಂಯುಕ್ತ ಜಮಾಅತ್ ಕರ್ನಾಟಕ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಹನೀಫ್ ಹಾಜಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಆಶ್ರಫ್ ಸಅದಿ ಮಲ್ಲೂರು ನೇತೃತ್ವದಲ್ಲಿ ಆ ಕುಟುಂಬಕ್ಕೆ ಗರಿಷ್ಠ ಸಹಾಯವನ್ನು ಸರಕಾರ ನೀಡಬೇಕು ಎಂದು ಕರ್ನಾಟಕ ವಿಧಾನ ಸಭಾದ್ಯಕ್ಷರಾದ ಯು.ಟಿ ಖಾದರ್ ರವರನ್ನು ಭೇಟಿ ಮಾಡಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಸಿದ್ದೀಖ್ ಸಖಾಫಿ ಮೂಳೂರು, ಬದ್ರುದ್ದೀನ್ ಅಝ್ಹರಿ ಕೈಕಂಬ, ಹೈದರ್ ಅಲಿ ಹಿಮಮಿ ಮಲಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!