ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಟ್ಲದ ಪ್ರಾಪ್ತಿ ಶೆಟ್ಟಿಗೆ ಬೆಳ್ಳಿ ಪದಕ
ಪುತ್ತೂರು: ಶ್ರೀ ಜಿ. ಬಾಬಾ ಸರಸ್ವತಿ ವಿದ್ಯಾಮಂದಿರ ಗೋವರ್ಧನ ರಸ್ತೆ ಮಥುರಾ ಇಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದಿದ್ದು, ವಿಟ್ಲದ ಪ್ರಾಪ್ತಿ ಶೆಟ್ಟಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಪ್ರಥಮ ವಿಜ್ಞಾನ ವಿಭಾಗದ ಪೃಥ್ವಿಶ್ ಬಿ ರೈ ಇವರು ಚಿನ್ನದ ಪದಕವನ್ನು ಪಡೆದು ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯ (ಎಸ್.ಜಿ.ಎಫ್.ಐ ) ನಡೆಸುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ದ್ವಿತೀಯ ವಾಣಿಜ್ಯ ವಿಭಾಗದ ಪ್ರಾಪ್ತಿ ಶೆಟ್ಟಿ ಹಾಗೂ ರಾಮ್ ಪ್ರಸಾದ್ ಬೆಳ್ಳಿಯ ಪದಕವನ್ನು ಪಡೆದುಕೊಂಡಿರುತ್ತಾರೆ. ಪ್ರಥಮ ವಿಜ್ಞಾನ ವಿಭಾಗದ ಘನಶ್ಯಾಮ್ ಇವರು ಕಂಚಿನ ಪದಕವನ್ನು ಪಡೆದಿರುತ್ತಾರೆ.
ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಪ್ರಾಪ್ತಿ ಶೆಟ್ಟಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ಸೆನ್ಸಾಯಿ ಮಾಧವ ಅಳಿಕೆ ಇವರ ಮಾರ್ಗದರ್ಶನದಲ್ಲಿ ರೋಹಿತ್ ಎಸ್ ಎನ್, ನಿಖಿಲ್ ಕೆ ಟಿ, ದಿಲೀಪ್, ಸುರೇಶ್ ಇವರು ತರಬೇತಿ ನೀಡಿರುತ್ತಾರೆ. ಇವರು ಕುಂಟುಕುಡೇಲು ನಿವಾಸಿ ಕಂದಾಯ ಇಲಾಖೆಯ ಗಿರೀಶ್ ಶೆಟ್ಟಿ ಮತ್ತು ಆಶಾ ದಂಪತಿಗಳ ಪುತ್ರಿ ಯಾಗಿದ್ದಾಳೆ.
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ವಿ. ಎಸ್., ಡಾ. ಜ್ಯೋತಿ ಕುಮಾರಿ ಮತ್ತು ಯತೀಶ್ ಇವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.
ರಾಷ್ಟ್ರ ಮಟ್ಟದ ಪಂದ್ಯಾಟದಲ್ಲಿ ಪ್ರಾಪ್ತಿ ಶೆಟ್ಟಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ಸೆನ್ಸಾಯಿ ಮಾಧವ ಅಳಿಕೆ ಇವರ ಮಾರ್ಗದರ್ಶನದಲ್ಲಿ ರೋಹಿತ್ ಎಸ್ ಎನ್, ನಿಖಿಲ್ ಕೆ ಟಿ, ದಿಲೀಪ್, ಸುರೇಶ್ ಇವರು ತರಬೇತಿ ನೀಡಿರುತ್ತಾರೆ.





