ಕಾಸರಗೋಡು: ಭೀಕರ ರಸ್ತೆ ಅಪಘಾತ: ವರ್ಕಾಡಿಯ ಮಹಿಳೆ ಮೃತ್ಯು: ಇಬ್ಬರು ಗಂಭೀರ
ಕಾಸರಗೋಡು: ಕಾರು ಮತ್ತು ಥಾರ್ ಜೀಪು ನಡುವೆ ಉಂಟಾದ ಅಪಘಾತದಲ್ಲಿ ಮಹಿಳೆಯೋರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ರಾಷ್ಟೀಯ ಹೆದ್ದಾರಿಯ ಬಂದ್ಯೋಡು ಸಮೀಪದ ಮುಟ್ಟಂ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.
ಮೃತಪಟ್ಟ ಮಹಿಳೆ ವರ್ಕಾಡಿ ಮಚ್ಚಂಪಾಡಿ ಕೋಡಿ ನಿವಾಸಿ ವರ್ಕಾಡಿಯ ಮಚ್ಚಂಪಾಡಿ ನಿವಾಸಿ ಫಾತಿಮತ್ ಮಿರ್ಜಾಮತ್(28) ಮೃತಪಟ್ಟ ಮಹಿಳೆ.
ಗಂಭೀರ ಗಾಯಗೊಂಡ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಮೃತಪಟ್ಟ ಮಹಿಳೆ ಆಲ್ಟೊ ಕಾರಿನಲ್ಲಿದ್ದವರು ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.





