December 18, 2025

2025ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೈನಾರ್ ತಾಳಿತ್ತನೂಜಿಗೆ ಹುಟ್ಟೂರು ಸನ್ಮಾನ

0
image_editor_output_image-112081669-1763309279117

ಬಂಟ್ವಾಳ: ಕೊಳ್ನಾಡು; 2025ನೇ ಸಾಲಿನ ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಹಸೈನಾರ್ ತಾಳಿತ್ತನೂಜಿಗೆ ತಾಳಿತ್ತನೂಜಿ ನಾಗರೀಕರ ವತಿಯಿಂದ ಭವ್ಯವಾದ ಹುಟ್ಟೂರು ಸನ್ಮಾನ ಕಾರ್ಯಕ್ರಮ ನೆರವೇರಿತು.

*ಕರ್ನಾಟಕ–ಕೇರಳ ಗಡಿಭಾಗದ ಹಲವು ಗ್ರಾಮಗಳಲ್ಲಿ ಅಸ್ಸ-ಸದಖ್ ಟ್ರಸ್ಟ್, ಜಮಾಅತೆ ಇಸ್ಲಾಂ ಸಮಾಜಸೇವಾ ಘಟಕ, SKSM ಸಮಾಜಸೇವಾ ಘಟಕ, ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಸೇರಿ ಅನೇಕ ಸಂಘ–ಸಂಸ್ಥೆಗಳು ಹಾಗೂ ದಾನಿಗಳ ಸಹಕಾರದೊಂದಿಗೆ ಸಮಾಜಮುಖೀ ಚಟುವಟಿಕೆಗಳನ್ನು ಹಮ್ಮಿಕೊಂಡು, ಜಾತಿ–ಧರ್ಮ ಭೇದವಿಲ್ಲದೆ “ಮನುಷ್ಯ ಧರ್ಮವೇ ಶ್ರೇಷ್ಠ ಧರ್ಮ” ಎಂಬ ದ್ಯೇಯ್ಯದೊಂದಿಗೆ ಹಸೈನಾರ್ ತಾಳಿತ್ತನೂಜಿ ದೀರ್ಘಕಾಲದಿಂದ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

*ಸಾರ್ವಜನಿಕ ಕುಡಿಯುವ ನೀರಿನ ಸೌಕರ್ಯ, ಸರ್ಕಾರಿ ಶಾಲೆಗಳು ಉಳಿಯಲಿ ಬೆಳೆಯಲಿ ಎಂಬ ನಿಟ್ಟಿನಲ್ಲಿ ಶಾಲೆಗಳ ಅಗತ್ಯತೆ ಪೂರೈಸಿ ಅಭಿವೃದ್ಧಿಯ ಕೊಡುಗೆ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ, ವೈದ್ಯಕೀಯ ನೆರವು, ಸರ್ಕಾರಿ ಕಲ್ಯಾಣ ಯೋಜನೆಗಳ ಜಾಗೃತಿ—ಇತ್ಯಾದಿ ಅನೇಕ ಕ್ಷೇತ್ರಗಳಲ್ಲಿ ಅವರು ನೀಡಿರುವ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.*

*ಹುಟ್ಟೂರಿನಲ್ಲಿ ನಡೆದ ಸನ್ಮಾನ ಸಮಾರಂಭಕ್ಕೆ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯ, ಸ್ಥಳೀಯ ಸಂಘದ ಅಧ್ಯಕ್ಷ ಹಾಗೂ ಸಹಕಾರಿ ದುರೀಣ ಮಜಿ ರಾಮ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, “ಹಸೈನಾರ್ ತಾಳಿತ್ತನೂಜಿ ನಮ್ಮ ನೆರೆಹೊರೆಯವರು; ತನ್ನ ಪತ್ನಿ ನಮ್ಮ ಸ್ಥಳೀಯ ಗ್ರಾ.ಪಂಚಾಯತ್ ಸದಸ್ಯೆ ಹಾಗೂ ಕೊಳ್ನಾಡು ಗ್ರಾಮ ಪಂಚಾಯತ್ ಉಪಾದ್ಯಕ್ಷರು ಕೂಡ,ದಂಪತಿಗಳಿಬ್ಬರೂ ಸಮಾಜಕ್ಕೆ ಮಾದರಿ,” ಎಂದು ಪ್ರಶಂಸಿಸಿದರು.*

*ನಂತರ ಸ್ಥಳೀಯ ಮುಖಂಡರು ಹಾಗೂ ಗಣ್ಯರಾದ ದಾಮೋದರ ರೈ ಬಾರೆಬೆಟ್ಟು, ಮದುಕರ ಶೆಟ್ಟಿ ದೇವಸ್ಯ ಮಾತಾಡಿ ಇದು ನಮ್ಮೂರಿಗೆ ಹೆಮ್ಮೆಯ ವಿಷಯ ತಾಳಿತ್ತನೂಜಿ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಬಿಸಿರುವುದು ಎಂದು ನುಡಿದರು, ದೇವಪ್ಪ ಗೌಡ, ನಾರಾಯಣ ಭಟ್ ತಾಳಿತ್ತನೂಜಿ, ಉದ್ಯಮಿ ಸಲಾಂ ಸಮ್ಮಿ ತಾಳಿತ್ತನೂಜಿ ಮತ್ತು ಹಿರಿಯರಾದ ಇಬ್ರಾಹಿಂ ತಾಳಿತ್ತನೂಜಿ ಹಸೈನಾರ್ ತಾಳಿತ್ತನೂಜಿಯವರು ತಮ್ಮ ಸೇವಾ ಕಾರ್ಯಗಳ ಮೂಲಕ ಗ್ರಾಮಾಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಾನ ನುಡಿಗಳನ್ನಾಡಿದರು.*

*ಸನ್ಮಾನ ಸ್ವೀಕರಿಸಿ ಮಾತಾಡಿದ ಹಸೈನಾರ್ ತಾಳಿತ್ತನೂಜಿ ನಾನು ಸಮಾಜಸೇವೆ ಮಾಡಲು ಬೆನ್ನೆಲುಬಾಗಿ ನಿಂತು ಕಾಣದ ಕೈಗಳಂತೆ ನಿಂತು ಯಾವುದೇ ಪ್ರತಿಪಾಲಕ್ಷೆಯಿಲ್ಲದೆ ತನ್ನ ಮುಖಾಂತರ ವಿವಿಧ ಕೊಡುಗೆ ನೀಡಿದ ಸಂಘ ಸಂಸ್ಥೆಗಳು,ದಾನಿಗಳು,ಅಂತರಾಷ್ಟ್ರೀಯ ಸಂಸ್ಥೆಗಳು,ಹಿತೈಷಿಗಳನ್ನು ನೆನಪಿಸಿದರು.ಅವರೂ ಕೂಡ ನನಗೆ ದೊರೆತಿರುವ ಪ್ರಶಸ್ತಿಯ ಪಾಲುದಾರರು ಎಂದು ಬಾವುಕರಾಗಿ ನುಡಿದು,ಧನ್ಯವಾದ ತಿಳಿಸಿದರು.ಅಲ್ಲದೆ ಊರಿನ ನಾಗರೀಕರ ಪ್ರೀತಿ ವಿಶ್ವಾಸ ಹಾರೈಕೆ ಈಗೆಯೇ ಮುಂದು  ವರೆಯಲಿ ಎಂದು ಊರಿನವರು ನೀಡಿದ ಸಹಕಾರಕ್ಕೆ ಧನ್ಯವಾದ ತಿಳಿಸಿದರು.*

ಈ ಸರಳ ಸಮಾರಂಭದಲ್ಲಿ ಊರಿನ ನಾಗರೀಕರು ಜಾತಿ ಮತ ಬೇದವಿಲ್ಲದೆ ಬಾಗವಹಿಸಿರುವುದು ಇವರ ಕಾರ್ಯವೈಖರಿ ಮತ್ತು ಜಾತ್ಯಾತೀತ ತತ್ವ ಸಿದ್ದಾಂತಕ್ಕೆ,ಮಾನವೀಯ ಹೃದಯಕ್ಕೆ  ಹಿಡಿದ ಕೈಗನ್ನಡಿಯಾಗಿದೆ.

*ಕಾರ್ಯಕ್ರಮವನ್ನು ಉದ್ಯಮಿ ಸಲಾಂ ಸಮ್ಮಿ ತಾಳಿತ್ತನೂಜಿ ಪ್ರಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು,ಅಬೂಬಕ್ಕರ್ ಸಿದ್ದೀಕ್ (ಮುಖ್ತಾರ್) ನಿರೂಪಿಸಿ ಧನ್ಯವಾದ ತಿಳಿಸಿದರು.*

Leave a Reply

Your email address will not be published. Required fields are marked *

error: Content is protected !!