November 22, 2024

ವಿಟ್ಲ ಪ.ಪಂ ಚುನಾವಣೆ UPDATE: ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.52.38 % ಮತದಾನ

0

ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿಯ 18 ವಾರ್ಡುಗಳಿಗೆ ಚುನಾವಣೆ ಇಂದು ನಡೆಯುತ್ತಿದ್ದು, ಬೆಳಿಗ್ಗೆನಿಂದಲೇ ಮತದಾರರು ಉತ್ಸಹದಿಂದ ಬಂದು ಮತ ಚಲಾಯಿಸುತ್ತಿದ್ದಾರೆ. ಮಧ್ಯಾಹ್ನ 1 ಗಂಟೆ ವೇಳೆಗೆ ಶೇ. 52.38 ಮತದಾನವಾಗಿದೆ.

ವಿಟ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಒಕ್ಕೆತ್ತೂರು ಸರ್ಕಾರಿ ಶಾಲೆ, ವಿಠಲ ಪದವಿ ಪೂರ್ವ ಕಾಲೇಜು, ಮೇಗಿನ ಪೇಟೆ, ಮತಗಟ್ಟೆಯಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.52.38 ಮತದಾನವಾಗಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ ನೀಡಿ ತಮ್ಮ ಕಾರ್ಯಕರ್ತರ ಜತೆ ಮಾತುಕತೆ ನಡೆಸಿದರು. ಎಎಸ್ಪಿ ಶಿವಾಂಸ ರಜಪೂತ್ ಅವರು ಭೇಟಿ ನೀಡಿ, ಬಂದೋ ಬಸ್ತ್ ಬಗ್ಗೆ ಪರಿಶೀಲಿಸಿದರು.

ಪಟ್ಟಣ ಪಂಚಾಯಿತಿ ಚುನಾವಣೆಗೆ ವಿದ್ಯುತ್ ಚಾಲಿತ ಮತಯಂತ್ರಗಳನ್ನು ಬಳಸಿಕೊಳ್ಳಲಾಗಿದ್ದು, ಅಗತ್ಯ ವ್ಯವಸ್ಥೆಗಳನ್ನು 18ವಾರ್ಡ್ ನ ಮತಗಟ್ಟೆಯಲ್ಲಿ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ 4ಅಧಿಕಾರಿಗಳು, ಓರ್ವ ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.

42 ಮಂದಿ ಅಭ್ಯರ್ಥಿಗಳು ಕಣದಲ್ಲಿರುವ ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಎಸ್.ಡಿ.ಪಿ.ಐ. ಕೆಲ ವಾರ್ಡ್ ಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದಿದೆ. ಇಬ್ಬರು ಪಕ್ಷೇತರರೂ ಕಣದಲ್ಲಿದ್ದಾರೆ. 7191 ಮಂದಿ ಪುರುಷ ಮತದಾರರು, 7554 ಮಂದಿ ಮಹಿಳಾ ಮತದಾರರು ಸೇರಿದಂತೆ 14,715೧೪ ಮಂದಿ ಮತದಾರರಿದ್ದು, 18 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಕಾರ್ಯಕ್ಕೆ ಸಂಬಂಧಿಸಿದಂತೆ ಪಿಆರ್‌ಒ, ಎಪಿಆರ್‌ಒ ಹಾಗೂ ಪಿಒ ಸಹಿತ ಒಟ್ಟು ೮೮ ಮಂದಿ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಕಣದಲ್ಲಿರುವ ಅಭ್ಯರ್ಥಿಗಳು ಇವರು: ೧ನೇ ವಾರ್ಡ್ನ ಕಾಂಗ್ರೆಸ್ ವಿ. ಮಹಮ್ಮದ್ ಅಶ್ರಫ್, ಬಿಜೆಪಿ ಕೃಷ್ಣಪ್ಪ ಗೌಡ, ೨ನೇ ವಾರ್ಡ್ ಕಾಂಗ್ರೆಸ್ ಕಮಲಾಕ್ಷಿ, ಬಿಜೆಪಿ ಸಂಗೀತ, ಎಸ್. ಡಿ. ಪಿ. ಐ. ಆಯಿಷ ಎನ್., ೩ನೇ ವಾರ್ಡ್ ಕಾಂಗ್ರೆಸ್ ಶ್ರೀನಿವಾಸ ಶೆಟ್ಟಿ, ಬಿಜೆಪಿ ಸಿ.ಎಚ್.ಜಯಂತ, ೪ನೇ ವಾರ್ಡ್ ಕಾಂಗ್ರೆಸ್ ಆಯಿಷಾ, ಬಿಜೆಪಿ ರಕ್ಷಿತ, ೫ನೇ ವಾರ್ಡ್ ಕಾಂಗ್ರೆಸ್ ವಸಂತಿ, ಬಿಜೆಪಿ ವಸಂತ ಕೆ., ೬ನೇ ವಾರ್ಡ್ ಕಾಂಗ್ರೆಸ್ ಲೀಲಾವತಿ, ಬಿಜೆಪಿ ವಿಜಯಲಕ್ಷ್ಮಿ, ೭ನೇ ವಾರ್ಡ್ ಕಾಂಗ್ರೆಸ್ ಶಿವಪ್ರಸಾದ್ ವಿ., ಬಿಜೆಪಿ ರವಿಪ್ರಕಾಶ್ ಯಸ್., ೮ನೇ ವಾರ್ಡ್ ಕಾಂಗ್ರೆಸ್ ಸುನೀತ ಕೊಟ್ಯಾನ್, ಬಿಜೆಪಿ ಸುನೀತಾ, ಎಸ್. ಡಿ. ಪಿ. ಐ ರಝೀಯಾ, ೯ ನೇ ವಾರ್ಡ್ ಕಾಂಗ್ರೆಸ್ ಶಿವಪ್ರಸಾದ್, ಬಿಜೆಪಿ ಎನ್. ಕೃಷ್ಣ,, ೧೦ನೇ ವಾರ್ಡ್ ಕಾಂಗ್ರೆಸ್ ಪದ್ಮ, ಬಿಜೆಪಿ ಸುಮತಿ, ೧೧ನೇ ವಾರ್ಡ್ ಕಾಂಗ್ರೆಸ್ ರಮಾನಾಥ ವಿ, ಬಿಜೆಪಿ ಅರುಣ್ ಎಂ, ಪಕ್ಷೇತರ ಜಾನ್ ಡಿಸೋಜ, ೧೨ನೇ ವಾರ್ಡ್ ಕಾಂಗ್ರೆಸ್ ಎಂ. ಕೆ. ಮೂಸಾ, ಬಿಜೆಪಿ ಹರೀಶ್ ಸಿ. ಎಚ್., ೧೩ನೇ ವಾರ್ಡ್ ಕಾಂಗ್ರೆಸ್ ಅಸ್ಮ ಯು.ಕೆ, ಬಿಜೆಪಿ ಪುಷ್ಪಾ, ಎಸ್.ಡಿ.ಪಿ.ಐ. ಶಾಕೀರ, ೧೪ನೇ ವಾರ್ಡ್ ಕಾಂಗ್ರೆಸ್ ಮನೋಹರ ಲ್ಯಾನ್ಸಿ ಡಿ ಸೋಜ, ಬಿಜೆಪಿ ಅಶೋಕ್ ಕುಮಾರ್ ಶೆಟ್ಟಿ, ಪಕ್ಷೇತರ ಮೋಹನ್ ಸೇರಾಜೆ, ೧೫ನೇ ವಾರ್ಡ್ ಕಾಂಗ್ರೆಸ್ ಲತಾವೇಣಿ, ಬಿಜೆಪಿ ಸಂಧ್ಯಾಗಣೇಶ್, ೧೬ನೇ ವಾರ್ಡ್ ಕಾಂಗ್ರೆಸ್ ಡೀಕಯ್ಯ, ಬಿಜೆಪಿ ಕೃಷ್ಣಪ್ಪ, ೧೭ನೇ ವಾರ್ಡ್ ಕಾಂಗ್ರೆಸ್ ಶ್ರೀಚರಣ್, ಬಿಜೆಪಿ ಕರುಣಾಕರ, ೧೮ನೇ ವಾರ್ಡ್ ಕಾಂಗ್ರೆಸ್ ಅಬ್ದುಲ್ ರಹಿಮನ್, ಬಿಜೆಪಿ ಕೃಷ್ಣಪ್ಪ ಮೂಲ್ಯ, ಎಸ್.ಡಿ.ಪಿ.ಐ. ಸಯ್ಯದ್ ಇಲ್ಯಾಸ್.

Leave a Reply

Your email address will not be published. Required fields are marked *

error: Content is protected !!