March 22, 2026

ವಿಟ್ಲ: ಎಂ.ಗೋಪಾಲಕೃಷ್ಣ ಭಟ್ ನಿಧನ

0
IMG-20211226-WA0019.jpg

ವಿಟ್ಲ: ಸಮೀಪದ ಮಾಣಿಲ ಗ್ರಾಮದ ಮುಂಡವುಮೂಲೆ ನಿವಾಸಿ ಶ್ರೀ ಎಂ.ಗೋಪಾಲಕೃಷ್ಣ ಭಟ್ (೬೩ ವರ್ಷ) ಅವರು ಇಂದು ಹೃದಯಾಘಾತದಿಂದ ನಿಧನ ಹೊಂದಿದರು.

ಕೊಳ್ನಾಡು ಗ್ರಾಮದ ಮಾದಕಟ್ಟೆ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಅಳಕೆ ಶ್ರೀ ಸತ್ಯಸಾಯಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಅವರು ೪೦ ವರ್ಷಕ್ಕೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ವಿದ್ಯಾರ್ಥಿ ಸೇವಾದಳ, ಯಕ್ಷಗಾನ ತಾಳಮದ್ದಳೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೇತೃತ್ವ ವಹಿಸುತ್ತಿದ್ದರು.
ಅವರು ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು, ಸಹೋದರರು ಮತ್ತು ಅಪಾರ ಬಂಧುವರ್ಗ ಹಾಗೂ ಶಿಷ್ಯವರ್ಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!