February 3, 2026

ವಿಟ್ಲ: ಕುಲಾಲ ಸಂಘ ಮತ್ತು ಮಹಿಳಾ ಘಟಕದ ಸಹಭಾಗಿತ್ವದಲ್ಲಿ ೨೩ನೇ ವರ್ಷದ ವಾರ್ಷಿಕೋತ್ಸವ

0
IMG-20211226-WA0018.jpg

ವಿಟ್ಲ: ಕುಲಾಲ ಸಂಘ ಮತ್ತು ಮಹಿಳಾ ಘಟಕದ ಸಹಭಾಗಿತ್ವದಲ್ಲಿ ಗಣಪತಿ ಹೋಮ, ೨೩ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಾರ್ಷಿಕೋತ್ಸವ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಬಳಿಯಿರುವ ಸಂಘದ ನಿವೇಶನದಲ್ಲಿ ರವಿವಾರ ನಡೆಯಿತು.

ಕುಲಾಲ ಸಂಘದ ಅಧ್ಯಕ್ಷ ಬಿ.ಕೆ.ಬಾಬು ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದ.ಕ.ಜಿಲ್ಲೆ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್, ಲೇಖಕಿ ಕುಶಾಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ ಮಾತನಾಡಿದರು. ಇದೇ ಸಂದರ್ಭ ಎಸೆಸೆಲ್ಸಿ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಪಡೆದ ಶ್ರೇಯಸ್ ಅವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ವಿದ್ಯಾರ್ಥಿಗಳಿಗೆ ವಿಶೇಷ ಧನಸಹಾಯ ವಿತರಿಸಲಾಯಿತು.

ಕಟ್ಟಡ ಸಮಿತಿ ಅಧ್ಯಕ್ಷ ರಮಾನಾಥ ವಿಟ್ಲ ಪ್ರಸ್ತಾಪಿಸಿದರು. ಕುಲಾಲ ಮಹಿಳಾ ಘಟಕ ಅಧ್ಯಕ್ಷೆ ಸುಚಿತ್ರಾ ರಮಾನಾಥ ವಿಟ್ಲ ಸ್ವಾಗತಿಸಿದರು. ರಾಧಾಕೃಷ್ಣ ಎರುಂಬು ನಿರೂಪಿಸಿದರು. ಮಲ್ಲಿಕಾ ನಾರಾಯಣ ಉರಿಮಜಲು, ಹರ್ಷಿತಾ, ಅರುಣಾಕರ ಪೆರುವಾಜೆ, ನಾರಾಯಣ ಮೂಲ್ಯ ಪುಣಚ, ಸುರೇಶ್ ಕುಲಾಲ್ ಕಲಾರಸಿಕ ವಿಟ್ಲ ಸಹಕರಿಸಿದರು. ವೀರಪ್ಪ ಮೂಲ್ಯ ಪುಣಚ ವಂದಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!