ಬ್ರಹ್ಮಕಲಶೋತ್ಸವದಿಂದ ಸಂಸ್ಕಾರ, ಸಂಸ್ಕೃತಿಗಳ ಉಳಿವು: ಪೇಜಾವರ ಶ್ರೀ
ವಿಟ್ಲ: ದೇವಸ್ಯ ಗುರುಂಪು ಶ್ರೀ ಅರಸು ಮುಂಡಾಲತ್ತಾಯ ಸಪರಿವಾರ ದೈವಗಳ ಸನ್ನಿದಿಯ ನಾಗಬನದಲ್ಲಿ ಶ್ರೀ ನಾಗದೇವರ ಪುನಃ ಪ್ರತಿಷ್ಠೆ, ಬ್ರಹ್ಮಕಲಶವು ವೇ.ಮೂ.ಆಲಂಪಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವೇ.ಮೂ.ಕೀರ್ತನ ಕೆದಿಲಾಯರ ಪೌರೋಹಿತ್ಯದಲ್ಲಿ ರವಿವಾರ ನಡೆಯಿತು.
ಶನಿವಾರ ಸಂಜೆ ತಂತ್ರಿಗಳ ಆಗಮನವಾಗಿ ಶ್ರೀ ದೇವತಾ ಪ್ರಾರ್ಥನೆ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ಅಧಿವಾಸ, ಬಿಂಬಶುದ್ಧಿ ನಡೆಯಿತು. ರವಿವಾರ ಶ್ರೀ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಆಶ್ಲೇಷಾ ಬಲಿ, ಶ್ರೀ ನಾಗದೇವರ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಪ್ರಸನ್ನ ಪೂಜೆ, ವಟು ಆರಾಧನೆ ನಡೆಯಿತು.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಆಶೀರ್ವಚನ ನೀಡಿ, ಎಲ್ಲರೂ ಭಕ್ತಿ ಶ್ರದ್ಧೆಯಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಸಂಸ್ಕಾರ, ಸಂಸ್ಕೃತಿಯನ್ನು ಬಿಂಬಿಸಲು ಪ್ರತಿಷ್ಠೆ, ಬ್ರಹ್ಮಕಲಶ, ಇನ್ನಿತರ ಧಾರ್ಮಿಕ ಕಾರ್ಯಕ್ರಗಳು ಅಲ್ಲಲ್ಲಿ ನಡೆಯುತ್ತಿರಬೇಕು ಎಂದು ಹೇಳಿದರು.
ಅರಸು ಮುಂಡಾಲತ್ತಾಯ ಸೇವಾ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ, ಗೌರವಾಧ್ಯಕ್ಷ ವಿಟ್ಲ ಅರಮನೆಯ ಕೃಷ್ಣಯ್ಯ ಕೆ.ವಿಟ್ಲ, ಕಾರ್ಯದರ್ಶಿ ರವಿಚಂದ್ರ, ಕೋಶಾಧಿಕಾರಿ ಹರೀಶ್ ಹಾಗೂ ಸಮಿತಿಯ ಸರ್ವ ಸದಸ್ಯರು ಭಾಗವಹಿಸಿದ್ದರು.