February 3, 2026

ಇಡ್ಕಿದು ಸೇವಾ ಸಹಕಾರಿ ಸಂಘದ ಶತಮಾನೋತ್ಸವದ ಸಮಾರೋಪ:
ರೇಬಿಸ್ ನಿರೋಧಕ ಲಸಿಕಾ ಕಾರ್ಯಕ್ರಮಕ್ಕೆ ನಾಂದಿ ಹಾಡಿದ ಸಹಕಾರಿ ಸಂಘ: ಎಸ್.ಆರ್. ಸತೀಶ್ಚಂದ್ರ

0
IMG-20211226-WA0020.jpg

ವಿಟ್ಲ: ಸಹಕಾರಿ ಕ್ಷೇತ್ರ ಶತಮಾನೋತ್ಸವದ ಹಿಂದೆಯೇ ದೇಶದ ವಿಕಸನದ ಬಗ್ಗೆ ಕನಸು ಕಂಡ ಸಹಕಾರಿಗಳಿಂದ ಈ ಸಂಸ್ಥೆ ರೂಪುಗೊಂಡಿಗೆ. ರೇಬಿಸ್ ನಿರೋಧಕ ಲಸಿಕಾ ಕಾರ್ಯಕ್ರಮಕ್ಕೆ ನಾಂದಿ ಹಾಡಿದ ಸಹಕಾರಿ ಇದಾಗಿದೆ.ಸಹಕಾರ ಕ್ಷೇತ್ರ ಭಾರತದ ಜೀವನದ ಪದ್ದತಿ ಆಗಿದೆ ಎಂದು ಸಹಕಾರಿ ಭಾರತಿಯ ರಾಜ್ಯಾಧ್ಯಕ್ಷ ಎಸ್.ಆರ್. ಸತೀಶ್ಚಂದ್ರರವರು ಹೇಳಿದರು.

ಅವರು ಇಡ್ಕಿದು ಸೇವಾ ಸಹಕಾರಿ ಸಂಘದ ಶತಮಾನೋತ್ಸವದ ನೆನಪಿಗಾಗಿ ನಿರ್ಮಿಸಿರುವ ಶತಾಮೃತ ಕಟ್ಟಡದ ಉದ್ಘಾಟನಾ ಸಮಾರಂಭದ ಬಳಿಕ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹುಟ್ಟಿನಿಂದ ಸಾವಿನವರೆಗೆ ಸಹಕಾರಿ ಕ್ಷೇತ್ರದ ಅವಶ್ಯಕತೆಯಿದೆ. ಸರಕಾರದ ಪ್ರತಿಯೊಂದೂ ಯೋಜನೆಗಳು ಸಹಕಾರಿ ಕ್ಷೇತ್ರದ ಮೂಲಕ ಪ್ರತಿ ಮನೆಮನೆಗಳಿಗೆ ತಲುಪುವಂತಾಗಿದೆ. ದರೆಶದಲ್ಲಿ ೩ಲಕ್ಷ ದಹಕಾರಿ ಸಂಘಗಳು ಸ್ಥಾಪನೆಯಾಗಲಿದ್ದು ಸಹಕಾರಿ ಬಂಧುಗಳ ಸರ್ವ ಹಿತವನ್ನು ಕಾಪಾಡಲಿದೆ ಎಂದರು.

ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಇಡ್ಕಿದು ಗ್ರಾಮ ಪಂಚಾಯತ್ ಮುಖ್ಯಾಧಿಕಾರಿ ಗೋಕುಲ್ ದಾಸ್ ಭಕ್ತ, ಇಡ್ಕಿದು ಸೇಚಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರುಗಳಾದ ಪದ್ಮನಾಭ ಕೊಂಕೋಡಿ, ಕೆ. ಸುಬ್ರಹ್ಮಣ್ಯ ಉರಿಮಜಲು, ಕೆ. ಸುಬ್ರಾಯ ಭಟ್ ಕೊಂಕೋಡಿ, ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಎಸ್. ಮುಕ್ಕುಡ, ಪುತ್ತೂರು ಸೈಂಟ್ ವಿಕ್ಟರ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮುಖ್ಯೋಪಾಧ್ಯಾಯರಾದ ಹ್ಯಾರಿ ಡಿಸೋಜ, ಇಡ್ಕಿದು ಸೇವಾ ಸಹಕಾರಿ ಸಂಘದ ಹಿರಿಯ ಸದಸ್ಯೆ ಗೌರಮ್ಮ ಉರಿಮಜಲು,
ಕುಂಡಡ್ಕ ಶ್ರೀ ವುಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ವಿಟ್ಲ ವಲಯ ಮೇಲ್ವಿಚಾರಕರಾದ ಯೋಗೀಶ್ ಹೆಚ್., ಪುತ್ತೂರು ತಾಲೂಕು ಮಾನವಹಕ್ಕು ಅಧ್ಯಕ್ಷರು, ಕ.ರಾ.ರ.ಸಾ.ನಿಗಮದ ನಿವೃತ್ತ ಮೇಲ್ವಿಚಾರಕರಾದ ಅಬ್ದುಲ್ ಅಜೀಜ್ ಕೆ., ಇಡ್ಕಿದು ಸೇವಾಸಹಕಾರಿ ಸಂಘದ ಉಪಾಧ್ಯಕ್ಷ ರಾಮ್ ಭಟ್ ನೀರಪಳಿಕೆ, ನಿರ್ದೇಶಕರಾದ ನಾರಾಯಣ ನೇರ್ಲಾಜೆ, ಪ್ರವೀಣ್ ಕುಮಾರ್ ಕೊಪ್ಪಲ, ಜಯಂತ ಡಿ. ದರ್ಭೆ, ಸುಂದರ ಪಿ. ಪಾಂಡೇಲು, ಜನಾರ್ಧನ ಪೂಜಾರಿ ಕಾರ್ಯಾಡಿ, ವಸಂತ ಉರಿಮಜಲು, ಶಿವಪ್ರಕಾಶ್ ಕೆ.ವಿ. ಕೂವೆತ್ತಿಲ, ಶೇಖರ ನಾಯ್ಕ ಅಳಕೆಮಜಲು, ನಳಿನಿ ಪೆಲತ್ತಿಂಜ, ರತ್ನ ಸೇಕೆಹಿತ್ತಿಲು, ವಿಜಯಲಕ್ಷ್ಮೀ ಪಿಲಿಪ್ಪೆ, ವೃತ್ತಿಪರ ನಿದೇಶಕ ಗೋಪಾಲಕೃಷ್ಣ ಭಟ್ ಮಿತ್ತೂರು ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಸ್ಥೆಯ ಏಳಿಗೆಗೆಗಾಗಿ ಸಹಕಾರ ನೀಡಿದ ಎಲ್ಲರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮುಖಕಾರ್ಯ ನಿರ್ವಹಣಾಧಿಕಾರಿ ಈಶ್ವರ ನಾಯ್ಕ ಎಸ್. ಸ್ವಾಗತಿಸಿ. ಸಿಬ್ಬಂದಿ ಈಶ್ವರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ರವೀಂದ್ರ ಮೇಲಂಟ ವಂದಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!