January 31, 2026

ಬಿಜೆಪಿ ಮುಖಂಡ ವೆಂಕಟೇಶ್ ಕೊಲೆ: ಕೊಲೆಯ ಮಾಸ್ಟರ್ ಮೈಂಡ್‌ಗೆ ಮಾಹಿತಿ ನೀಡಿದ್ದ ಇಬ್ಬರು ಆಪ್ತರ ಬಂಧನ

0
image_editor_output_image-729183686-1762256484637.jpg

ಕೊಪ್ಪಳ: ಬಿಜೆಪಿ ಮುಖಂಡ ವೆಂಕಟೇಶ್ ಕುರುಬರ ಕೊಲೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಕೊಲೆಯ ಮಾಸ್ಟರ್ ಮೈಂಡ್‌ಗೆ ಮಾಹಿತಿ ನೀಡಿದ್ದ ಇಬ್ಬರು ಆಪ್ತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತರನ್ನು ಶರಣಬಸವ ಹಾಗೂ ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ. ಇಬ್ಬರು ಮೃತ ವೆಂಕಟೇಶ ಆಪ್ತ ಸ್ನೇಹಿತರಾಗಿದ್ದರು ಎಂದು ತಿಳಿದುಬಂದಿದೆ.
ಕೊಪ್ಪಳದ ಗಂಗಾವತಿ ನಗರದಲ್ಲಿ ಕಳೆದ ಅ.8 ರಂದು ಬಿಜೆಪಿ ಮುಖಂಡ ವೆಂಕಟೇಶ ಬರ್ಬರ ಹತ್ಯೆ ನಡೆದಿತ್ತು. ತನಿಖೆ ವೇಳೆ ವೆಂಕಟೇಶ ಜೊತೆಗಿದ್ದವರೇ ಕೊಲೆಗೆ ಸಂಚು ಹಾಕಿ, ಪ್ರಮುಖ ಆರೋಪಿ ರವಿ ಗ್ಯಾಂಗ್ ಜೊತೆ ಶಾಮೀಲಾಗಿದ್ದರು ಎಂಬುದು ಬೆಳಕಿಗೆ ಬಂದಿದೆ.

ಕೆಲ ವೈಯಕ್ತಿಕ ಕಾರಣಕ್ಕೆ ಆರೋಪಿ ರವಿ ಹಾಗೂ ಹತ್ಯೆಯಾದ ವೆಂಕಟೇಶ ಕುರುಬರ ನಡುವೆ ವೈಮನಸ್ಸು ಮೂಡಿತ್ತು. ಈ ದ್ವೇಷ ಕೊಲೆಯ ಹಂತದವರೆಗೆ ಮುಂದುವರಿದು ನಂತರ ವೆಂಕಟೇಶನ ಕೊಲೆಗೆ ಕಾರಣವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿದವರು ಹಾಗೂ ಸುಪಾರಿ ನೀಡಿದ್ದ ಎಲ್ಲ ಹತ್ತು ಜನ ಆರೋಪಿಗಳನ್ನು ಬಂಧಿಸಿದ್ದಾಗಿ ಪೋಲಿಸರು ತಿಳಿಸಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹತ್ಯೆಯಾದ ವೆಂಕಟೇಶ ಜೊತೆ ಇದ್ದುಕೊಂಡೆ ಈತನ ಕೊಲೆಗೆ ಸಂಚು ರೂಪಿಸಿದ್ದ ರವಿಯ ತಂಡಕ್ಕೆ ಮಾಹಿತಿ ನೀಡಿದ್ದಾರೆ ಎಂಬ ಆರೋಪ ಇವರಿಬ್ಬರ ಮೇಲಿದೆ. ವೆಂಕಟೇಶ ಕೊಲೆಗೂ ಮೊದಲು ರವಿ ಮತ್ತು ವೆಂಕಟೇಶನ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿತ್ತು. ಆಡಿಯೋದಲ್ಲಿ ರವಿ, ವೆಂಕಟೇಶ ಕುರಿತು ನೀನು ಸಾಕಿದ ನಾಯಿಗಳೇ ನಿನ್ನನ್ನು ಕೊಲ್ಲುತ್ತಾರೆ. ನೀನು ಎಚ್ಚರದಿಂದ ಇರು ಎಂದು ವಾರ್ನಿಂಗ್ ಮಾಡಿದ್ದರು. ವೆಂಕಟೇಶ ಕೊಲೆಯಲ್ಲಿ ಆತನ ಸ್ನೇಹಿತರೂ ಭಾಗಿ ಆಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು

Leave a Reply

Your email address will not be published. Required fields are marked *

error: Content is protected !!