ಕಡಬ: ಮೀನು ಮಾರಾಟ ವಿಚಾರಕ್ಕೆ ರಸ್ತೆ ಮದ್ಯೆಯೇ ಹೊಡೆದಾಟ: ವಿಡಿಯೋ ವೈರಲ್
ಕಡಬ: ಮೀನು ಮಾರಾಟಕ್ಕೆ ಸಂಬಂಧಿಸಿದಂತೆ ನಡೆದ ಮಾತಿನ ಚಕಮಕಿ ಎರಡು ಗುಂಪಿನ ಮೀನು ಮಾರಾಟಗಾರರ ನಡುವೆ ಹೊಡೆದಾಟಕ್ಕೆ ಕಾರಣವಾದ ಘಟನೆ ಕಡಬ ಗ್ರಾಮದ ಸಂತೆಕಟ್ಟೆ ಮೀನು ಮಾರುಕಟ್ಟೆ ಬಳಿ ನವೆಂಬರ್ 1 ರಂದು ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಬ್ಬರು ಅಂಗಡಿ ಮಾಲೀಕರ ನಡುವೆ ನಡೆದ ತೀವ್ರ ವಾಗ್ವಾದವು ಹೊಡೆದಾಟವಾಗಿ ತಿರುಗಿರುವುದನ್ನು ಕಾಣಬಹುದಾಗಿದೆ.
ಅಂಗಡಿ ಮಾಲೀಕರಾದ ರಾಜು ಮ್ಯಾಥ್ಯೂ ಮತ್ತು ಆಡಮ್ ಅವರ ನಡುವೆ ಮೀನು ಮಾರಾಟದ ವಿಚಾರವಾಗಿ ವಾದ-ವಿವಾದ ನಡೆದಿದ್ದು, ಬಳಿಕ ರಾಜು ಮ್ಯಾಥ್ಯೂ, ಆಡಮ್, ಫಯಾಜ್, ರಕ್ಷಿತ್ ಮಣಿ, ಮತ್ತು ನೌಫಾಲ್ ಎಂಬ ಐವರು ಗಲಾಟೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಘರ್ಷಣೆಯು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತಂದ ಕಾರಣ, ಕಡಬ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023 ರ ಕಲಂ 194(2) ಅಡಿಯಲ್ಲಿ ಪ್ರಕರಣ (ಅಪರಾಧ ಸಂಖ್ಯೆ: 73/2025) ದಾಖಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ.




