ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದರಸ(ರಿ) ಪರಿಮ ಜಾರಿಗೆಬೈಲು ಗಲ್ಫ್ ಸಮಿತಿ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದರಸ(ರಿ)ಪರಿಮ ಜಾರಿಗೆಬೈಲು ಗಲ್ಫ್ ಸಮುತಿ 2025-26ನೇ ಮಹಾಸಭೆಯು ದಿನಾಂಕ 18/10/2025 ರಂದು ಅಬುಧಾಬಿಯಲ್ಲಿರುವ ಖಾಲಿದಿಯ್ಯಾ ಇಮ್ರಾನ್ NP ನಾಳ ರವರ ಮನೆಯಲ್ಲಿ ನಡೆಯಿತು. ಮಹಾಸಭೆಗೆ ಗಲ್ಫ್ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.
ಉಸ್ತಾದ್ ಹಸನ್ ದಾರಿಮಿ ಕಬಕ ಇವರ ದುವಾಶಿರ್ವಾದದೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು. ಹಸನ್ ದಾರಿಮಿ ಉಸ್ತಾದರು ಒಂದು ಸಂಸ್ಥೆಯೊಂದಿಗೆ ತನ್ನನ್ನು ಯಾವ ರೀತಿಯಲ್ಲಿ ಸಮರ್ಪಿಸಿಕೊಳ್ಳಬೇಕು ಮತ್ತು ದೀನಿ ಸ್ಥಾಪನೆಗಳಿಗೆ ಮಾಡುವ ಸಹಾಯವೂ ಅದು ಯಾವುದೇ ರೀತಿಯಲ್ಲೂ ಅಲ್ಲಾಹನು ನಿಮಗೆ ಅದರ ಪ್ರತಿಫಲವನ್ನು ನೀಡುತ್ತಾನೆ, ಸಮಸ್ತದ ಅಧೀನದಲ್ಲಿರುವ ಮದರಸದ ಅಭಿವೃದ್ಧಿಗೆ ತಾವೆಲ್ಲರೂ ಶಕ್ತಿಮೀರಿ ಪ್ರಯತ್ನಿಸಬೇಕು ಎಂದರಲ್ಲದೆ, ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದರಸ(ರಿ)ಪರಿಮ ಜಾರಿಗೆಬೈಲು ಗಲ್ಫ್ ಕಮಿಟಿಯ ಪ್ರವರ್ತನೆಯನ್ನು ಶ್ಲಾಘಿಸಿ ಗಲ್ಫ್ ಸಮಿತಿಯ ಸದಸ್ಯರನ್ನು ಅಭಿನಂಧಿಸಿದರು.
ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದರಸ(ರಿ) ಪರಿಮ ಜಾರಿಗೆಬೈಲು ಗಲ್ಫ್ ಸಮಿತಿಯ 2024-25ನೇ ಸಾಲಿನ ಒಂದು ವರ್ಷದ ಎಲ್ಲಾ ದಾಖಲೆಗಳನ್ನು ಮಹಾ ಸಭೆಯಲ್ಲಿ ಅಧ್ಯಕ್ಷರಾಗಿದ್ದ ಇಮ್ರಾನ್ ಎನ್ ಪಿ ನಾಳರವರು ಸದಸ್ಯರೆಲ್ಲರ ಗಮನಕ್ಕೆ ತರಲಾಯಿತು.
ನಂತರ ಮಹಾಸಭೆಯು ಮುಂದುವರಿಯುತ್ತಾ, ನೂತನ ಪದಾಧಿಕಾರಿಗಳ ಆಯ್ಕೆಯನ್ನು ಉಸ್ತಾದ್ ಹಸನ್ ದಾರಿಮಿಯವರ ನೈತೃತ್ವದಲ್ಲಿ ನಡೆಸಲಾಯಿತು.
ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದರಸ(ರಿ) ಪರಿಮ ಜಾರಿಗೆಬೈಲು ಗಲ್ಫ್ ಸಮಿತಿಯಲ್ಲಿ ನೂತನ ಸಾರಥಿಗಳ ಆಯ್ಕೆಮಾಡಲಾಯಿತು. ಗಲ್ಫ್ ಸಮಿತಿಯ ಗೌರವಾಧ್ಯಕ್ಷರಾಗಿ ಜನಾಬ್ ಮಜೀದ್ ಪರಿಮರವರನ್ನು ಸದಸ್ಯರೆಲ್ಲರ ಒಮ್ಮತದ ಅಭಿಪ್ರಾಯದಂತೆ ಆಯ್ಕೆಮಾಡಿ ಘೋಷಿಸಲಾಯಿತು. ನೂತನ ಅಧ್ಯಕ್ಷರಾಗಿ ಇಮ್ರಾನ್ NP ನಾಳರವರು, ಉಪಾಧ್ಯಕ್ಷರಾಗಿ ಮುಸ್ತಫಾ ಅಚಾರಿಬೊಟ್ಟು ರವರನ್ನು ಆಯ್ಕೆ ಮಾಡಲಾಯಿತು, ಪ್ರಧಾನ ಕಾರ್ಯದರ್ಶಿಯಾಗಿ ಹಂಝತ್ ಅಲಿ ಕೆಪಿ ನಾಳ ರವರು, ಜೊತೆ ಕಾರ್ಯದರ್ಶಿಯಾಗಿ ನಿಯಾಜ಼್ ಜಾರಿಗೆಬೈಲು, ಕೋಶಾಧಿಕಾರಿಯಾಗಿ ಜನಾಬ್ ಅಶ್ರಫ್ ಪರಿಮ ಮತ್ತು ಹಮೀದ್ ಕುಕ್ಕುಡಿ ಯವರನ್ನು ಆಯ್ಕೆಮಾಡಲಾಯಿತು. ಹಾಗೂ ಝಾಯಿದ್ ಪರಿಮ, ಫಯಾಜ಼್, ಶಾಹಿದ್ ಅಲಿ ಕೆಪಿ, ಜುನೈದ್ ಎನ್ ಪಿ, ಸಮದ್ ಮಸೀದಿ ಬಳಿ, ನೌಫಲ್ ಪರಿಮ, ನವಾಜ಼್, ಬಾಸಿತ್ ಅಲಿ ಕೆಪಿ ಸದಸ್ಯರನ್ನಾಗಿ ಮಾಡಲಾಯಿತು.
ಮಹಾಸಭೆಯ ಅಧ್ಯಕ್ಷತೆಯನ್ನು ಇಮ್ರಾನ್ ಎನ್ ಪಿಯವರು ವಹಿಸಿ ನೂತನ ಸಾರಥಿಗಳು ಉತ್ತಮ ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದರಸ(ರಿ) ಇದರ ಅಭಿವೃದ್ಧಿ ಕೆಲಸಗಳಲ್ಲಿ ಗಲ್ಫ್ ಸಮಿಯು ಸಂಪೂರ್ಣ ಸಹಕಾರ ಕೊಡಬೇಕೆಂದು ತಿಳಿಸಿ ನೂತನ ಸಾರಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು. ನಂತರ ನೂತನ ಸಾರಥಿಗಳು ಮತ್ತು ಸದಸ್ಯರ ಹೆಸರನ್ನು ನಿಯಾಜ಼್ ಜಾರಿಗೆಬೈಲು ವಾಚಿಸಿದರು. ಕಾರ್ಯಕ್ರಮದ ಕೊನೇಯಲ್ಲಿ ಹಂಝತ್ ಕೆಪಿ ನಾಳರವರು ಹಸನ್ ದಾರಿಮಿ ಉಸ್ತಾದ್ ಮತ್ತು ನೂತನ ಸಾರಥಿಗಳನ್ನು ಅಭಿನಂಧಿಸಿ ಧನ್ಯವಾದ ತಿಳಿಸಿದರು.




