ಖ್ಯಾತ ಬಾಲಿವುಡ್ ನಟ ಗೋವರ್ಧನ್ ಅಸ್ರಾನಿ ನಿಧನ
ಮುಂಬೈ : ಖ್ಯಾತ ಬಾಲಿವುಡ್ ನಟ ಗೋವರ್ಧನ್ ಅಸ್ರಾನಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕಳೆದ ಐದು ದಿನಗಳಿಂದ ಅವರು ಮುಂಬೈನ ಜುಹುವಿನಲ್ಲಿರುವ ಆರೋಗ್ಯ ನಿಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಅ*ಸುನೀಗಿದ್ದಾರೆ.
ಅಸ್ರಾನಿ ಅಂತ್ಯಕ್ರಿಯೆಯನ್ನು ಸಾಂತಾಕ್ರೂಜ್ ಪಶ್ಚಿಮದಲ್ಲಿರುವ ಶಾಸ್ತ್ರಿನಗರ ಸ್ಮಶಾನದಲ್ಲಿ ನಡೆಸಲಾಯಿತು ಎಂದು ತಿಳಿದು ಬಂದಿದೆ.
1941 ಜನವರಿ 1ರಂದು ಜೈಪುರದಲ್ಲಿ ಗೋವರ್ಧನ್ ಅಸ್ರಾನಿ ಜನಿಸಿದರು. ಆರು ದಶಕಗಳಿಂದ ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದರು. 1960ರಲ್ಲಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಅವರು, 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯ ಪ್ರಜ್ಞೆ ಮತ್ತು ಅದ್ಭುತ ಅಭಿನಯಗಳ ಮೂಲಕ ಜನ ಮನದಲ್ಲಿ ನೆಲೆಯಾಗಿದ್ದಾರೆ.
‘ಶೋಲೆ’ (1975) ಚಿತ್ರದ ಜೈಲರ್ ಪಾತ್ರ ಅವರಿಗೆ ಖ್ಯಾತಿ ತಂದು ಕೊಟ್ಟಿತ್ತು. ಖಟ್ಟಾ ಮೀಠಾ, ಚುಪೈ ಚುಪ್ಪೆ, ಚೋಟಿ ಸಿ ಬಾತ್, ಕೋಶಿಶ್, ಬಾವರ್ಚಿ ಮೊದಲಾದ ಚಿತ್ರಗಳಲ್ಲಿನ ಅವರ ಪಾತ್ರಗಳು ಜನಮಾನಸದಲ್ಲಿ ಅಮರವಾಗಿವೆ.




