40 ವರ್ಷಗಳ ಮ್ಯೂಸಿಕಲ್ ಜರ್ನಿಗೆ Mtv ವಿದಾಯ
ಮುಂಬೈ: ಕಳೆದ 40 ವರ್ಷಗಳಿಂದ ಸಂಗೀತ ಪ್ರಿಯರಿಗೆ ಸಂಗಿತದ ರಸದೌತಣ ಬಡಿಸುತ್ತಿದ್ದ ಎಂಟಿವಿ ಇದೀಗ ತನ್ನ ಮ್ಯೂಸಿಕ್ ಚಾನೆಲ್ ಗಳನ್ನು ಡಿಸೆಂಬರ್ ನಲ್ಲಿ ನಿಲ್ಲಿಸಲಿದೆ. ಈ ವರ್ಷದ ಅಂತ್ಯಕ್ಕೆ ತನ್ನ ಮ್ಯೂಸಿಕ್ ಚಾನೆಲ್ ಗಳಿಂದ ವಿದಾಯ ಹೇಳಲಿದೆಟ
MTV ಯ ಕಂಪನಿಯಾದ ಪ್ಯಾರಾಮೌಂಟ್ ಗ್ಲೋಬಲ್, ತನ್ನ ಸಂಗೀತ ಚಾನೆಲ್‌ಗಳಾದ MTV 80s, MTV ಮ್ಯೂಸಿಕ್, ಕ್ಲಬ್ MTV, MTV 90s ಮತ್ತು MTV ಲೈವ್ ಡಿಸೆಂಬರ್ 31, 2025 ರ ವೇಳೆಗೆ ವಿಶ್ವಾದ್ಯಂತ ಸ್ಥಗಿತಗೊಳ್ಳಲಿವೆ ಎಂದು ಘೋಷಿಸಿದೆ. ಯುಕೆ ಮತ್ತು ಐರ್ಲೆಂಡ್‌ನಲ್ಲಿ ಸ್ಥಗಿತಗೊಳಿಸುವಿಕೆಗಳು ಪ್ರಾರಂಭವಾಗಲಿದ್ದು, ನಂತರ ಯುರೋಪ್‌ನ ಉಳಿದ ಭಾಗಗಳು, ಬ್ರೆಜಿಲ್, ಫ್ರಾನ್ಸ್ ಮತ್ತು ಪೋಲೆಂಡ್ ಮತ್ತು ನಂತರ ಏಷ್ಯಾದಲ್ಲಿ ಸ್ಥಗಿತಗೊಳ್ಳುತ್ತವೆ.




