ವಿಟ್ಲ: ವಿಟ್ಲ ಸುತ್ತಮುತ್ತಲಿನಲ್ಲಿ ಭಾರೀ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತ
ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ಮೇಗಿನಪೇಟೆ, ಚಂದಳಿಕೆ, ಸಿಪಿಸಿಆರ್ ಐ, ನಿಡ್ಯ ಭಾಗದಲ್ಲಿ ರಸ್ತೆಯಲ್ಲಿ ಮಳೆ ನೀರು ವಾಹನ ಚಾಲಕರು ಪರದಾಡಿದ್ದಾರೆ.

ಮೇಗಿನಪೇಟೆಯಲ್ಲಿ ಚರಂಡಿ ರಸ್ತೆಯಲ್ಲಿ ಹೂತು ಹೋದ ಪರಿಣಾಮ ಮಳೆ ನೀರು ರಸ್ತೆಯಲ್ಲಿ ನಿಂತಿದೆ. ಇದರಿಂದ ವೇಗವಾಗಿ ತೆರಳುವ ವಾಹನಗಳಿಂದ ಅಂಗಡಿಗಳ ಮುಂಭಾಗಕ್ಕೆ ನೀರು ಚೆಲ್ಲಿ ಆತಂಕ ಸೃಷ್ಟಿಸಿದೆ. ಸುಮಾರು ಒಂದು ತಾಸುಗಳಿಗಿಂತೂ ಹೆಚ್ಚು ಕಾಲ ಮಳೆ ಸುರಿದಿದೆ.




