February 2, 2026

ಬೆಂಗಳೂರು ಲಾಡ್ಜ್ ನಲ್ಲಿ ಪ್ರೇಯಸಿ ಜತೆಗಿದ್ದ ಪುತ್ತೂರು ಮೂಲದ ಯುವಕ ಮೃತ್ಯು

0
image_editor_output_image-1756784901-1760786207614

ಬೆಂಗಳೂರು: ಪ್ರೇಯಸಿ ಜೊತೆ ಲಾಡ್ಜ್​ ನಲ್ಲಿ ತಂಗಿದ್ದ ಪ್ರಿಯಕರ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರ್ಯಾಂಡ್ ಚಾಯ್ಸ್ ಎನ್ನುವ ಲಾಡ್ಜ್​ ನಲ್ಲಿ ಪುತ್ತೂರು ಮೂಲದ ತಕ್ಷಿತ್(20) ನಿಗೂಢವಾಗಿ ಸಾವನ್ನಪ್ಪಿದ್ದಾನೆ.

8 ದಿನದ ಹಿಂದೆ ಪ್ರೇಯಸಿ ಜತೆ ಬೆಂಗಳೂರಿಗೆ ಬಂದಿದ್ದ ತಕ್ಷಿತ್, ಮಡಿವಾಳದ ಗ್ರ್ಯಾಂಡ್ ಚಾಯ್ಸ್ ಎನ್ನುವ ಲಾಡ್ಜ್​ ಹುಡುಗಿ ಜೊತೆ ವಾಸವಾಗಿದ್ದ. ಆದ್ರೆ, ನಿನ್ನೆ (ಅಕ್ಟೋಬರ್ 17) ಲಾಡ್ಜ್​ ನ ರೂಮಿನಲ್ಲಿ ತಕ್ಷಿತ್ ಶವವಾಗಿ ಪತ್ತೆಯಾಗಿದ್ದಾನೆ.

ಪುತ್ತೂರಿನಿಂದ ಬಂದಿದ್ದ ಯುವಕ ತಕ್ಷಿತ್ ವಿರಾಜಪೇಟೆಯ ರಕ್ಷಿತಾ ಎನ್ನುವ ಯುವತಿ ಜೊತೆ ಲಾಡ್ಜ್ ಮಾಡಿಕೊಂಡಿದ್ದ. ಯುವಕನ ಸಾವಿಗೂ ಮುನ್ನ ಯುವತಿ ರಕ್ಷಿತಾ ಲಾಡ್ಜ್ ನಿಂದ ಹೊರಗಡೆ ಹೋಗಿದ್ದಾಳೆ ಎನ್ನಲಾಗಿದೆ. ಸ್ವಿಗ್ಗಿಯಿಂದ ಊಟ ಆರ್ಡರ್ ಮಾಡಿದ ಪ್ರೇಮಿಗಳು ಒಟ್ಟಿಗೆ ಊಟ ಮಾಡಿದ್ದರು. ನಂತರ ಇಬ್ಬರಿಗೆ ಫುಡ್ ಪಾಯ್ಸಿನ್ ಆಗಿ ಮಾತ್ರೆಗಳನ್ನು ತಿಂದಿದ್ದರು. ಸ್ವಲ್ಪ ಸುಧಾರಿಸಿಕೊಂಡ ಬಳಿಕ ರಕ್ಷಿತಾ ಲಾಡ್ಜ್ ನಿಂದ ಹೊರಗಡೆ ಹೋಗಿದ್ದಾರೆ. ಆದರೆ ರೂಮಿನಲ್ಲಿ ಯುವಕ ತಕ್ಷಿತ್ ಮಾತ್ರ ಮೃತಪಟ್ಟಿದ್ದಾನೆ.

ಯುಡಿಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಯುವಕನ ಸಾವಿಗೆ ತನಿಖೆಯಿಂದಷ್ಟೇ ಕಾರಣ ತಿಳಿದು ಬರಬೇಕಿದೆ.

ಇನ್ನು ಈ ಪ್ರಕರಣ ಸಂಬಂಧ ಲಾಡ್ಜ್ ಸಿಬ್ಬಂದಿ ಅಬ್ದುಲ್ ಪ್ರತಿಕ್ರಿಯಿಸಿದ್ದು, ಅಕ್ಟೋಬರ್ 9 ರಂದು ಮಧ್ಯಾಹ್ನ ಚೆಕ್ ಇನ್ ಆಗಿದ್ದರು. ಕಾಲೇಜು ಕೆಲಸ ನಿಮಿತ್ತ ಬಂದಿದ್ದಾಗಿ ಹೇಳಿದ್ರು. ಇಬ್ಬರು ಒಂದೇ ಕಡೆ ಉಳಿದುಕೊಂಡಿದ್ದರು. ಟೈಮ್ ಟು ಟೈಮ್ ಪೇಮೆಂಟ್ ಮಾಡುತ್ತಿದ್ದರು. ಹೊರಗಡೆಯಿಂದ ಊಟ ತರಿಸಿಕೊಳ್ಳುತ್ತಿದ್ದರು. ಆದ್ರೆ, ನಿನ್ನೆ ರಾತ್ರಿ ಇವರು ಇದ್ದ ರೂಂನಲ್ಲಿ ಯುವಕ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ಬಂದು ಹೋಗಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!