February 2, 2026

ಮುಲ್ಕಿ: 1.5 ಕೋಟಿ ಹಣ, ಚಿನ್ನ ಪಡೆದು ಹಲವರಿಗೆ ವಂಚನೆ: ಆರೋಪಿಯ ಬಂಧನ

0
image_editor_output_image-1313196888-1760787314260.jpg

ಮುಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿನ ಕಿನ್ನಿಗೋಳಿ ಪರಿಸರದಲ್ಲಿನ ಸಾರ್ವಜನಿಕರಿಗೆ ಮಾರುಕಟ್ಟೆಯಲ್ಲಿ ಹಣವನ್ನು ಹೊಡಿಕೆ ಮಾಡಿ ಲಾಭಾಂಶ ನೀಡುವುದಾಗಿ ಸುಮಾರು 1.5 ಕೋಟಿ ಹಣ ಹಾಗೂ ಚಿನ್ನವನ್ನು ಪರಿಚಯಸ್ಥರಿಂದ ಪಡೆದು ಹಲವರಿಗೆ ವಂಚಿಸಿದ್ದ ಆರೋಪಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕವತ್ತಾರಿನ ರಿಚ್ಚರ್ಡ್ ಡಿ ಸೋಜಾ ಮತ್ತು ಅವರ ಪತ್ನಿ ರಶ್ಮಿ ರೀಟಾ ಪಿಂಟೋ ಬಂಧಿತ ಆರೋಪಿಗಳು. ಇವರು ಹಣ ಪಡೆದು ವಂಚನೆ ಎಸಗುತ್ತಿದ್ದ ಬಗ್ಗೆ ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಂಧನಕ್ಕೆ ಸಿಗದೆ ದಂಪತಿ ಸುಮಾರು ಒಂದೂವರೆ ವರ್ಷಗಳಿಂದ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದರು. ಇದೀಗ ಅಲ್ಲಿ ಗಂಡ-ಹೆಂಡತಿಯನ್ನು ಮುಲ್ಕಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!