February 1, 2026

ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಸಾವು

0
image_editor_output_image-401284972-1759905105424.jpg

ಹಾಸನ: ಕೃಷಿ ಹೊಂಡಕ್ಕೆ ಬಿದ್ದ ಆಟಿಕೆ ರೈಲನ್ನು ತರಲು ನೀರಿಗೆ ಇಳಿದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕರನ್ನು ಗ್ರಾಮದ ಕೃಷ್ಣ ಎಂಬವರ ಪುತ್ರ ಪ್ರಣಯ್ (7) ಹಾಗೂ ಪ್ರಶಾಂತ್ ಎಂಬವರ ಪುತ್ರ ನಿಶಾಂತ್ ಎಂದು ಗುರುತಿಸಲಾಗಿದೆ. ಪ್ರಣಯ್ ಎರಡನೇ ತರಗತಿ ಓದುತ್ತಿದ್ದು, ನಿಶಾಂತ್ ಅಂಗನವಾಡಿಗೆ ಹೋಗುತ್ತಿದ್ದ. ಈ ಇಬ್ಬರೂ ಶಾಲೆಗೆ ರಜೆ ಇದ್ದ ಕಾರಣ ಕೂಲಿಗೆ ಹೋಗಿದ್ದ ಪೋಷಕರ ಜೊತೆ ಕಾಫಿ ತೋಟಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!