December 16, 2025

ಕುಂಬಳೆ ಶಾಲೆಯಲ್ಲಿ ಫೆಲೆಸ್ತೀನ್ ಪರ ವಿದ್ಯಾರ್ಥಿಗಳ ಪ್ರಹಸನ ಮರು ಪ್ರದರ್ಶನ

0
image_editor_output_image2115463375-1759904571458.jpg

ಕಾಸರಗೋಡು: ಕುಂಬಳೆ ಹಯರ್ ಸೆಕೆಂಡರಿ ಶಾಲೆಯಲ್ಲಿ ಫೆಲೆಸ್ತೀನ್ ಅನ್ನು ಬೆಂಬಲಿಸಿ ವಿದ್ಯಾರ್ಥಿಗಳ ಪ್ರಹಸನ ಪ್ರದರ್ಶನವನ್ನು ಶಿಕ್ಷಕರು ತಡೆದ ಕಾರಣಕ್ಕೆ ಸ್ಥಗಿತಗೊಂಡಿದ್ದ ಶಾಲಾ ಕಲೋತ್ಸವ ಸೋಮವಾರ ಮುಂದುವರಿಯಿತು.

ಇದೇವೇಳೆ ಶಿಕ್ಷಕರಿಂದ ತಡೆಯಲ್ಪಟ್ಟ ಫೆಲೆಸ್ತೀನ್ ಬೆಂಬಲಿತ ಮೂಕಾಭಿನಯದ ಪ್ರಹಸನವನ್ನು ವಿದ್ಯಾರ್ಥಿಗಳು ಇಂದು ಮರು ಪ್ರದರ್ಶಿಸಿದರು.

ಅ.3ರಂದು ಎರಡು ದಿನಗಳ ಶಾಲಾ ಕಲೋತ್ಸವ ಆರಂಭಗೊಂಡಿತ್ತು. ಈ ವೇಳೆ ಫೆಲೆಸ್ತೀನ್ ಅನ್ನು ಬೆಂಬಲಿಸಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಮೂಕಾಭಿನಯದ ಪ್ರಹಸಕ್ಕೆ ಶಿಕ್ಷಕರು ತಡೆಯೊಡ್ಡಿದ್ದರು. ಇದರಿಂದ ಗೊಂದಲವೇರ್ಪಟ್ಟು ಕಲೋತ್ಸವ ಸ್ಥಗಿತಗೊಳಿಸಲಾಗಿತ್ತು.

ಶಿಕ್ಷಕರ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಘಟನೆಯ ಬಗ್ಗೆ ರಾಜ್ಯ ಶಿಕ್ಷಣ ಸಚಿವರು ಮತ್ತು ಜಿಲ್ಲಾಧಿಕಾರಿಯವರು ಶಿಕ್ಷಣ ಇಲಾಖೆಯಿಂದ ವರದಿ ಕೇಳಿದ್ದರು. ವಿದ್ಯಾರ್ಥಿ ಸಂಘಟನೆಗಳಾದ ಎಂಎಸ್‌ಎಫ್‌, ಎಸ್‌ಎಫ್‌ಐ ಸೇರಿದಂತೆ ಹಲವು ಸಂಘಟನೆಗಳು ಶಿಕ್ಷಕರ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದವು. ಈ ಎಲ್ಲಾ ಬೆಳವಣಿಗೆಯ ಬಳಿಕ ಕಲೋತ್ಸವವನ್ನು ಸೋಮವಾರ ಮತ್ತೆ ಮುಂದುವರಿಸಲು ತೀರ್ಮಾನಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!