ಕೊಳ್ನಾಡು ಗ್ರಾ.ಪಂ ಪ್ರಥಮ ಹಂತದ ಗ್ರಾಮ ಸಭೆ
ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮ ಪಂಚಾಯತ್ ನ 2025-26 ನೇ ಸಾಲಿನ ಕೊಳ್ನಾಡು ಗ್ರಾಮದ,ಪ್ರಥಮ ಹಂತದ ಗ್ರಾಮ ಸಭೆಯು ದಿನಾಂಕ 04-10-2025 ನೇ ಶನಿವಾರ ಪೂರ್ವಾಹ್ನ 11.00 ಗಂಟೆಗೆ ಗ್ರಾಮ ಪಂಚಾಯತ್ ಕಛೇರಿಯ ನೇತ್ರಾವತಿ ಸಬಾಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಶ್ರಫ್ ಕೆ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಗ್ರಾಮ ಪಂಚಾಯತ್ ನ ಜಮಾ ಖರ್ಚು ಮತ್ತು ಕಾಮಗಾರಿಗಳ ವರದಿಯನ್ನು ಗ್ರಾಮಸಭೆಗೆ ಪಂಚಾಯತ್ ಅಧಿಕಾರಿ ಮತ್ತು ಸಿಬ್ಬಂದಿಗಳು ನೀಡಿ ಓದಿ ಹೇಳಿದರು . ವಿವಿಧ ಇಲಾಖಾ ಸೌಲಭ್ಯಗಳ ಮಾಹಿತಿಯನ್ನು ಇಲಾಖಾಧಿಕಾರಿಗಳು ನೀಡಿದರು. ಗ್ರಾಮಸ್ಥರ ಸಮಸ್ಯೆ ಮತ್ತು ಪ್ರಶ್ನೆಗಳಿಗೆ, ಪಂಚಾಯತ್ ಅಧ್ಯಕ್ಷರಾದ ಶ್ರೀ ಅಶ್ರಫ್ ಕೆ,ಉಪಾಧ್ಯಕ್ಷರಾದ ಶ್ರೀಮತಿ ಅಸ್ಮ ಹಸೈನಾರ್, ಸದಸ್ಯರಾದ ಶ್ರೀ ಸುಭಾಸ್ ಚಂದ್ರ ಶೆಟ್ಟಿ ಕುಳಾಲ್ ಮತ್ತು ಇತರ ಸದಸ್ಯರು ಉತ್ತರ ನೀಡಿ ಪರಿಹಾರ ಮಾರ್ಗೋಪಾಯವನ್ನು ತಿಳಿಸಿದರು.
ಮಂಚಿ ಆರೋಗ್ಯ ಕೇಂದ್ರದ, ಆರೋಗ್ಯ ಸಹಾಯಕಿ ಶ್ರೀಮತಿ ಹರಿಣಾಕ್ಷಿ N ರವರು ಪುದು ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡಿರುವುದರಿಂದ, ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅವರು ನೀಡಿದ ಜನ ಸೇವೆಗೆ ಅವರನ್ನು ಸನ್ಮಾನಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಹರೀಶ್ K A ರವರು ಸ್ವಾಗತಿಸಿದರು, ಶ್ರೀ ದಿನೇಶ್ ಸಹಾಯಕ ತೋಟಗಾರಿಕಾ ನಿರ್ದೇಶಕರು ನೋಡಲ್ ಅಧಿಕಾರಿಯಾಗಿ ಸಭೆಗೆ ಮಾರ್ಗದರ್ಶನ ನೀಡಿದರು, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಲಾವಣ್ಯ P ರವರ ಉಪಸ್ಥಿತಿಗೆ ಕೃತಜ್ಞತೆಯನ್ನು ಸಲ್ಲಿಸಿ ಲೆಕ್ಕ ಸಹಾಯಕರಾದ ಶ್ರೀ ದಿನೇಶ್ ರವರು ಎಲ್ಲರಿಗೂ ಧನ್ಯವಾದವನ್ನು ಸಮರ್ಪಿಸಿದರು.




