ದಸರಾ ಪ್ರಯುಕ್ತ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು
ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು ಓಡಲಿದೆ.
ನೈರುತ್ಯ ರೈಲ್ವೇ ವಲಯವು ದಸರಾ ಹಬ್ಬದ ಪ್ರಯುಕ್ತ ಬೆಂಗಳೂರಿನ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣದಿಂದ ಕುಣಿಗಲ್ ಮಾರ್ಗವಾಗಿ ಮಂಗಳೂರು ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಕುಣಿಗಲ್ ಮಾರ್ಗವಾಗಿ ಯಶವಂತಪುರ ಜಂಕ್ಷನ್ ನಡುವೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.
ನಂ. 06257 ಯಶವಂತಪುರ ಜಂಕ್ಷನ್ ಮಂಗಳೂರು ಜಂಕ್ಷನ್ ಉತ್ಸವ ವಿಶೇಷ ರೈಲು ಯಶವಂತಪುರದಿಂದ ಸೆ.
30ರಂದು ಮಂಗಳವಾರ ರಾತ್ರಿ 11.55ಕ್ಕೆ ಹೊರಟು ಮಂಗಳೂರು ಜಂಕ್ಷನ್‌ಗೆ ಮರುದಿನ 11.15ಕ್ಕೆ ತಲಪುವುದು. ನಂ. 06258 ಮಂಗಳೂರು ಜಂಕ್ಷನ್ ಯಶವಂತಪುರ ಜಂಕ್ಷನ್ ವಿಶೇಷ ರೈಲು ಮಂಗಳೂರು ಜಂಕ್ಷನ್‌ನಿಂದ ಅ. 1ರಂದು ಮಧ್ಯಾಹ್ನ 2.35ಕ್ಕೆ ಹೊರಟು ಯಶವಂತಪುರ ಜಂಕ್ಷನ್‌ಗೆ ಅದೇ ರಾತ್ರಿ 11.30ಕ್ಕೆ ತಲಪುವುದು.
ಎಲ್ಲೆಲ್ಲಿ ನಿಲುಗಡೆ? ಮಂಗಳೂರು ಜಂಕ್ಷನ್ ಹಾಗೂ ಯಶವಂತಪುರ ಜಂಕ್ಷನ್ ನಡುವೆ ಬಂಟ್ವಾಳ, ಕಬಕ-ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಚೆನ್ನರಾಯಪಟ್ಟಣ, ಕುಣಿಗಲ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ.
ಈ ರೈಲಿನಲ್ಲಿ ಎರಡು ಎಸಿ 2 ಟೈರ್, 3 ಎಸಿ 3 ಟೈರ್ ಕೋಚ್, 11 ಸ್ಲಿಪರ್, 4 ಜನರಲ್, 2 ಸೆಕೆಂಡ್ ಕ್ಲಾಸ್ ಕಂ ಲಗೇಜ್ ವ್ಯನ್ ಹೊಂದಿರುತ್ತದೆ.




