March 5, 2026

ಮಂಜೇಶ್ವರ: ಕುಸಿದು ಬಿದ್ದ ಶಾಲಾ ಮೇಲ್ಛಾವಣಿ

0
image_editor_output_image1811538202-1758862972445.jpg

ಮಂಜೇಶ್ವರ: ಶಾಲಾ ಮೇಲ್ಛಾವಣಿ ಕುಸಿದು ಬಿದ್ದ ಘಟನೆ ಸೆ.೨೫ರಂದು ಉದ್ಯಾವರ ದಲ್ಲಿರುವ ಕುಂಜತ್ತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ತರಗತಿಯಲ್ಲಿ ಮಕ್ಕಳು ಇಲ್ಲದೆ ಇದ್ದುದರಿಂದ ಭಾರೀ ಅಪಾಯ ಸ್ವಲ್ಪದರಲ್ಲೇ ತಪ್ಪಿದೆ . ಬೆಳಿಗ್ಗೆ 8.30 ರ ಸುಮಾರಿಗೆ ಘಟನೆ ನಡೆದಿದೆ.

ಎರಡನೇ ತರಗತಿಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಈ ಸಂದರ್ಭದಲ್ಲಿ ಮಕ್ಕಳು ತರಗತಿಗೆ ತಲುಪಿರಲಿಲ್ಲ. ಹಂಚು ಹಾಸಿದ ಶಾಲೆಯ ಕೆಳಗೆ ಅಳವಡಿಸಲಾದ ಸ್ಲಾಬ್ ಕುಸಿದು ಬಿದ್ದಿದೆ . ಸಮೀಪದಲ್ಲಿದ್ದ ಶಾಲಾ ಸಿಬಂದಿ್ಗಳು ಅಪಾಯವಿಲ್ಲದೆ ಪಾರಾದರು. ವರ್ಷಗಳ ಹಳೆಯದಾದ ಈ ಶಾಲಾ ಕಟ್ಟಡ ಪುನರ್ ನಿರ್ಮಿಸಬೇಕು ಎಂಬ ಒತ್ತಾಯ ಹಲವು ಸಮಯಗಳಿಂದ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!