March 5, 2026

ಕಾಸರಗೋಡು: ಅಪಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವು

0
image_editor_output_image-20497236-1758888242137.jpg

ಕಾಸರಗೋಡು: ಮಾದಕ ವಸ್ತು ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಕಾರಿನಲ್ಲಿ ತೆರಳುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಪಘಾತದಿಂದ ಸಾವಿಗೀಡಾಗಿರುವ ಘಟನೆ ಕಾಸರಗೋಡಿನ ಚೆಂಗಳ ನಾಲ್ಕನೇ ಮೈಲ್‌ನಲ್ಲಿ ನಡೆದಿದೆ.

ಬೇಕಲ ಡಿವೈಎಸ್‌ಪಿ ನೇತೃತ್ವದ ವಿಶೇಷ ತಂಡದ ಪೊಲೀಸ್‌ ಕಾನ್ಸೆಬಲ್ 40 ವರ್ಷದ ಕೆ.ಕೆ ಸಜೀಶ್ ಮೃತಪಟ್ಟವರು. ಇಂದು(ಸೆ.26) ಮುಂಜಾನೆ 2:45ರ ವೇಳೆ ಈ ಅಪಘಾತ ಸಂಭವಿಸಿದೆ.

ಸಜೀಶ್ ಪ್ರಯಾಣಿಸುತ್ತಿದ್ದ ಆಲೊ ಕಾರು ಹಾಗೂ ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಸಜೀಶ್‌ರನ್ನು ಸಮೀಪದ ಚೆಂಗಳದಲ್ಲಿರುವ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!