ನೀಟ್ ನಲ್ಲಿ ಶೇಕಡ 99.99 ಮಾರ್ಕ್ಸ್ ಪಡೆದಿದ್ದ ವಿದ್ಯಾರ್ಥಿ ಆತ್ಮಹತ್ಯೆ
ಮಹಾರಾಷ್ಟ್ರ: ನೀಟ್ ಪರೀಕ್ಷೆ ಪಾಸಾಗುವುದೇ ಒಂದು ದೊಡ್ಡ ಸವಾಲು ಅದರಲ್ಲೂ ರಾಂಕ್ ಮಟ್ಟದಲ್ಲಿ ಪಾಸಾಗಿ ಇನ್ನೇನು ಎಂಬಿಬಿಎಸ್ ಪ್ರವೇಶ ಪಡೆಯುವ ದಿನವೇ ವಿಧ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಅನುರಾಗ್ ಅನಿಲ್ ಬೋರ್ಕರ್ (19) ಜೀವ ಕಳೆದುಕೊಂಡ ವಿದ್ಯಾರ್ಥಿಯಾಗಿದ್ದಾನೆ. ನೀಟ್ ಪರೀಕ್ಷೆಗೆ ಉತ್ತಮ ತಯಾರಿಯನ್ನು ನಡೆಸಿದ್ದ ಅನುರಾಗ್ ನೀಟ್ ಯುಜಿ ಪರೀಕ್ಷೆಯಲ್ಲಿ 99.99 ಶೇಕಡಾ ಅಂಕದೊಂದಿಗೆ ಉತ್ತೀರ್ಣನಾಗಿದ್ದ ಜೊತೆಗೆ ಒಬಿಸಿ ವಿಭಾಗದಲ್ಲಿ 1475 ರ ಅಖಿಲ ಭಾರತ ರಾಂಕ್ ಗಳಿಸಿದ್ದ ಎನ್ನಲಾಗಿದೆ.
ಸಿಂದೇವಾಹಿ ತಾಲೂಕಿನ ನವಗಾಂವ್ ನಿವಾಸಿ ಅನುರಾಗ್ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಎನ್ನಲಾಗಿದೆ. ನೀಟ್ ನಲ್ಲಿ ಉತ್ತಮ ಫಲಿತಾಂಶ ಪಡೆದ ಬೆನ್ನಲ್ಲೇ ಪೋಷಕರ ಆಸೆಯಂತೆ ಎಂಬಿಬಿಎಸ್ ಕೋರ್ಸ್ ಮಾಡಲು ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ತೆರಳಲು ತಯಾರಿ ನಡೆಸುತ್ತಿದ್ದ ಅನುರಾಗ್ ಆದರೆ ಅದೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದು ಈ ವೇಳೆ ಆತನ ಬಳಿ ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ “ನಾನು ವೈದ್ಯನಾಗಲು ಬಯಸುವುದಿಲ್ಲ” ಎಂದು ಬರೆದಿತ್ತು ಎಂದು ಹೇಳಲಾಗಿದೆ.




