ಬಂಟ್ವಾಳ ಉಪನೋಂದಾವಣೆ ಕಚೇರಿಯಲ್ಲಿ ಕಾಣಿಸಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ
ಬಂಟ್ವಾಳ : ಸಿನಿಮಾ ನಟಿ ರಾಧಿಕಾ ಕುಮಾರಸ್ವಾಮಿ ಅವರು ಇಂದು ಆಶ್ಚರ್ಯ ಎಂಬಂತೆ ಬಿಸಿರೋಡಿನ ಆಡಳಿತ ಸೌಧದ ಕಚೇರಿಯ ಎರಡನೇ ಅಂತಸ್ತಿನಲ್ಲಿರುವ ಉಪನೋಂದಾವಣೆ ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ.
ತಾಯಿ ಜೊತೆ ಬಂದಿದ್ದ ಅವರಿಗೆ ನೋಂದಾವಣೆ ಕಚೇರಿಯಲ್ಲಿ ವಿಶೇಷ ಗೌರವ ನೀಡಿದ್ದು, ಕೇವಲ ಅರ್ಧ ತಾಸಿಗಿಂತಲೂ ಕಡಿಮೆ ಅವಧಿಯಲ್ಲಿ ತನ್ನ ಕೆಲಸ ಮುಗಿಸಿಕೊಂಡು ಮತ್ತೆ ವಾಪಸಾಗಿದ್ದಾರೆ.
ಆರಂಭದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಜಮೀನು ಖರೀದಿಸಿ ಬಳಿಕ ನೋಂದಣಿಗಾಗಿ ಬಂದಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡಿತ್ತು. ಸಾಮಾನ್ಯವಾಗಿ ನೋಂದಾವಣೆ ಕಚೇರಿಗೆ ಜಮೀನು ಖರೀದಿ ರಿಜಿಸ್ಟ್ರೇಷನ್ ಮಾಡಲು ಮಾತ್ರ ಬರುವುದು ಎಂಬ ತಪ್ಪು ಕಲ್ಪನೆ ಕೂಡ ಸಾರ್ವಜನಿಕರಲ್ಲಿರುವುರಿಂದ ಈ ಮಾತು ಹರಿದಾಡಿತ್ತು.
ಆದರೆ, ರಾಧಿಕಾ ಅವರು ಈ ಹಿಂದೆ ಖರೀದಿ ಮಾಡಿರುವ ಜಮೀನಿನ ಮೇಲೆ ತೆಗೆದಿದ್ದ ಅಡಮಾನವನ್ನು (ಸಾಲ) ತೀರುವಳಿ ರಶೀದಿ ಮಾಡಲು ಬಂದಿದ್ದಾರೆ ಎಂದು ಉಪನೋಂದಾವಣೆ ಕಚೇರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.




