March 5, 2026

ಆನ್ಲೈನ್ ಗೇಮ್ ಆ್ಯಪ್ ಮೊಬೈಲ್ ಗೆ ಇನ್ಸ್ಟಾಲ್ ಮಾಡಿಕೊಡುತ್ತಿದ್ದಕ್ಕೆ ಆರೋಪಿ ಅರೆಸ್ಟ್

0
image_editor_output_image-1206506986-1758348723333.jpg

ಕಾರ್ಕಳ: ಅಕ್ರಮವಾಗಿರುವ ಆನ್ ಲೈನ್ ಗೇಮ್ ಆ್ಯಪ್ ಗಳನ್ನು ಮೊಬೈಲ್ ಗೆ ಇನ್ಸ್ಟಾಲ್ ಮಾಡಿಕೊಡುತ್ತಿದ್ದ ವ್ಯಕ್ತಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತನನ್ನು ಮಂಗಳೂರು ಗಂಜಿಮಠದ ನಜೀರ್‌ (44 ) ಎಂದು ಗುರುತಿಸಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಮಣ್ ಗ್ರಾಮದಲ್ಲಿ ಈತ ಆನ್‌ಲೈನ್ ಗೇಮಿಂಗ್ ಆಡುತ್ತ ಇತರರಿಗೆ ಆಪ್‌ ಗಳನ್ನು ಇನ್ಸ್ಟಾಲ್‌ ಮಾಡಿಕೊಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಗ್ರಾಮಾಂತರ ಠಾಣ ಪಿಎಸ್ಐ ಆತನನ್ನು ವಶಕ್ಕೆ ಪಡೆದಿದ್ದಾರೆ.ಮಂಗಳೂರಿನಲ್ಲಿ ಸ್ಥಳೀಯ ಆಹಾರ

ನಜೀರ್ ಮೊಬೈಲ್ ಫೋನ್ ಪರಿಶೀಲಿಸಿದಾಗ ವೆಬ್ ಸೈಟ್ ಲಿಂಕ್ ಮತ್ತು App ಬಳಸಿ ಆನ್ಲೈನ್ ಬೆಟ್ಟಿಂಗ್ ಆಡುತ್ತಿರುವುದು ಕಂಡುಬಂದಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಆತನ ಬಳಿ ಇದ್ದ 30 ಸಾವಿರ ರೂ ವಶಕ್ಕೆ ಪಡೆಯಲಾಗಿದೆ.

Leave a Reply

Your email address will not be published. Required fields are marked *

error: Content is protected !!