March 5, 2026

ಕಾಪು: ಬಸ್ ಸ್ಟ್ಯಾಂಡ್ ನಲ್ಲಿ ಮಾತಿನ ಚಕಮಕಿ: ಮೂವರ ವಿರುದ್ಧ ಪ್ರಕರಣ ದಾಖಲು

0
image_editor_output_image279521577-1758348504050.jpg

ಕಾಪು: ಕಾಪು ಬಸ್ ಸ್ಟ್ಯಾಂಡ್ ನಲ್ಲಿ ಖಾಸಗಿ ಬಸ್ ಡ್ರೈವರ್ , ನಿರ್ವಾಹಕ ಮತ್ತು ಟೈನ್ ಕೀಪರ್ ನಡುವೆ ಮಾತಿನಚಕಮಕಿ ನಡೆದಿದ್ದು, ಇದರ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡಿರುವ ಆರೋಪದ ಮೇಲೆ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಲ್ಲೂಕು ಪಡು ಗ್ರಾಮದ ಕಾಪು ಪೇಟೆಯಲ್ಲಿರುವ ಕಾಪು-ಉಡುಪಿ ಬಸ್‌ ನಿಲ್ದಾಣದ ಬಳಿ ಈ ಮೂವರು ಜಗಳವಾಡಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿತ್ತು. ಈ ವಿಡಿಯೊ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಸ್‌ನ ಚಾಲಕ ನಿಜಾಮುದ್ದೀನ್, ನಿರ್ವಾಹಕ ಶೇಖ್ ಅಹಮ್ಮದ್ ಹಾಗೂ ಟೈಮ್ ಕೀಪರ್‌ ಚೇತನ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!