ಮೂಡಬಿದಿರೆ: ಟ್ರಕ್ಕಿಂಗ್‌ಗೆ ಹೋಗಿದ್ದ ಯುವಕ ಹೃದಯಾಘಾತದಿಂದ ಸಾವು
ಮೂಡಬಿದಿರೆ: ಕೊಣಾಜೆಕಲ್ಲಿಗೆ ಟ್ರಕ್ಕಿಂಗ್‌ಗೆ ಬಂದಿದ್ದ ಯುವಕ ಹೃದಯಾಘಾತಕ್ಕೆ ಬಲಿಯಾದ ದುರಂತ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಪುತ್ತೂರು ಮೂಲದ ಮನೋಜ್ ಎನ್ (25) ಮೃತ ಯುವಕ. ಇವರು ತನ್ನ ಸ್ನೇಹಿತನೊಂದಿಗೆ ಮೂಡುಬಿದ್ರೆಯ ಪ್ರವಾಸಿ ತಾಣವಾದ ಕೊಣಾಜೆ ಕಲ್ಲಿಗೆ ಟ್ರಕ್ಕಿಂಗ್‌ಗೆ ಬಂದಿದ್ದಾಗ ಎತ್ತರ ಪ್ರದೇಶಕ್ಕೆ ಹೊಗಿದ್ದಾರೆ. ಸಂದರ್ಭ ಎದೆ ನೋವು ಕಾಣಿಸಿಕೊಂಡಿದ್ದು, ಕುಳಿತುಕೊಂಡಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.




