March 14, 2026

ಚಿಕ್ಕಮಗಳೂರು: ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕದಿಯಲು ಯತ್ನ: ಆರೋಪಿಯ ಬಂಧನ

0
image_editor_output_image-1302557779-1758100486603.jpg

ಚಿಕ್ಕಮಗಳೂರು: ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಬೈಕ್ ನಲ್ಲಿ ಬಂದ ಕಳ್ಳನೋರ್ವ ಕದಿಯಲು ಯತ್ನಿಸಿದ ಘಟನೆ ಕೊಪ್ಪ ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಹೇಮಂತ್, ಮಹಿಳೆ ಸರ ಕದಿಯಲು ಯತ್ನಿಸಿದ ಯುವಕನಾಗಿದ್ದಾನೆ.

ಶಿಲ್ಪಾ ಎಂಬ ಮಹಿಳೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭಬೈಕ್ ನಲ್ಲಿ ಬಂದ ಹೇಮಂತ್ ಬೈಕ್ ರೈಡಿಂಗ್ ನಲ್ಲಿ ಇದ್ದಂತೆ ಮಹಿಳೆಯ ಕತ್ತಿನಲ್ಲಿದ್ದ 30 ಗ್ರಾಂ ಚಿನ್ನದ ಸರವನ್ನು ಕಸಿಯಲು ಯತ್ನಿಸಿದ್ದಾನೆ, ಈ ವೇಳೆ ಮಹಿಳೆ ಗಾಬರಿಗೊಂಡ ಮಹಿಳೆ ಅಲ್ಲಿದ್ದ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ, ಇತ್ತ ಸ್ಥಳೀಯರು ಒಟ್ಟಾಗುತ್ತಿದ್ದಂತೆ ಸ್ಥಳದಿಂದ ಯುವಕ ಕಾಲ್ಕಿತ್ತಿದ್ದಾನೆ ಕೂಡಲೇ ಸ್ಥಳೀಯರು ಪಕ್ಕದ ಗ್ರಾಮಕ್ಕೆ ಮಾಹಿತಿ ರವಾನಿಸಿದ್ದಾರೆ ಅದರಂತೆ ಕುರುಕುಬಳ್ಳಿ ಗ್ರಾಮದಲ್ಲಿ ಯುವಕನನ್ನು ಸೆರೆ ಹಿಡಿದಿದ್ದಾರೆ.

ಘಟನೆಗೆ ಸಂಬಂಧಿಸಿ ಹರಿಹರಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!