ಪ್ರೀತಿ ವೈಫಲ್ಯದಿಂದ ಕೀಟನಾಶಕ ಸೇವಿಸಿ ಯುವತಿ ಆತ್ಮಹತ್ಯೆ
ತೆಲಂಗಾಣ: ಪ್ರೀತಿ ವೈಫಲ್ಯದಿಂದ ಯುವತಿಯೊಬ್ಬಳು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಶಿವಂಪೇಟೆ ಜಿಲ್ಲೆಯ ನರಸಾಪುರದಲ್ಲಿ ಇತ್ತೀಚಿಗೆ ನಡೆದಿದೆ.
ತಲ್ಲಪಲ್ಲಿ ತಾಂಡಾದ ಸಕ್ಕುಬಾಯಿ (21) ಮೃತೆ. ಎಂಬಿಎ ಮುಗಿಸಿ ಮನೆಯಲ್ಲಿಯೇ ಇದ್ದು ಕೆಲಸ ಹುಡುಕಲು ಪ್ರಯತ್ನಿಸುತ್ತಿದ್ದ ಈಕೆ ಇಂದ್ರಕರಣ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿರುವ ನಾರಾಯಣಖೇಡ್‌ನ ಸುಧಾಕರ್ ಅಲಿಯಾಸ್ ಸಿದ್ದು ಎಂಬಾತನನ್ನು ತಾನು ಪ್ರೀತಿಸುತ್ತಿರುವುದಾಗಿಯೂ, ಆತನನ್ನೇ ಮದುವೆಯಾಗುವುದಾಗಿಯೂ ತನ್ನ ಪೋಷಕರಿಗೆ ತಿಳಿಸಿದ್ದಳು.
ಇದಕ್ಕೆ ಒಪ್ಪಿದ್ದ ಕುಟುಂಬ ಸದ್ಯಸರು ಇಬ್ಬರ ಗೋತ್ರಗಳನ್ನು(ಜ್ಯೋತಿಷ್ಯ) ಪರಿಶೀಲಿಸಿದಾಗ ಮತ್ತು ಕುಟುಂಬದ ಹಿನ್ನೆಲೆ ಪರಿಶೀಲನೆ ಮಾಡಿದಾಗ ಅವರಿಬ್ಬರೂ ಒಡಹುಟ್ಟಿದ್ದಾರೆ ಎಂದು ತಿಳಿಯುತ್ತದೆ. ಈ ಹಿನ್ನೆಲೆ ಕುಟಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.




