ನಟಿ ಭಾವನಾಗೆ ಅವಳಿ ಮಕ್ಕಳ ಜನನ: ಒಂದು ಮಗು ಸಾವು
ಬೆಂಗಳೂರು: ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭ ಧರಿಸಿದ್ದ ನಟಿ ಭಾವನಾ ಅವರಿಗೆ ಅವಳಿ ಮಕ್ಕಳ ಜನನವಾಗಿದ್ದು, ಆದರೆ ಒಂದು ಮಗು ಸಾವನಪ್ಪಿದೆ ಎಂದು ವರದಿಯಾಗಿದೆ.
40 ರ ಹರೆಯದಲ್ಲಿ ಐವಿಎಫ್ ತಂತ್ರಜ್ಞಾನದ ಮೂಲಕ ಭಾವನಾ ಗರ್ಭ ಧರಿಸಿದ್ದರು. ಎರಡು ವಾರಗಳ ಹಿಂದೆ ಹೆರಿಗೆ ಯಾಗಿರುವ ಬಗ್ಗೆ ವರದಿಯಾಗಿದ್ದು ಅವಳಿ ಶಿಶುಗಳ ಪೈಕಿ ಹೆಣ್ಣು ಮಗು ಕ್ಷೇಮವಾಗಿದ್ದು,ಮತ್ತೊಂದು ಬದುಕುಳಿದಿಲ್ಲ ಎಂದು ತಿಳಿದು ಬಂದಿದೆ.
ಗರ್ಭದಲ್ಲಿದ್ದ ಮಗುವಿನ ಆರೋಗ್ಯದಲ್ಲಿ ಸ್ವಲ್ಪ ಏರು ಪೇರು ಕಂಡು ಬಂದ ಕಾರಣ ಅವಧಿಗೂ ಮುನ್ನ ಅಂದರೆ 8 ತಿಂಗಳಲ್ಲಿ ಹೆರಿಗೆ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ. ಭಾವನಾ ಅವರೂ ಕ್ಷೇಮವಾಗಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಭಾವನಾ ಅವರು ನಿವಾಸದಲ್ಲಿ ಸೀಮಂತ ಸಂಭ್ರಮವನ್ನೂ ಆಚರಿಸಿಕೊಂಡಿದ್ದರು.





