ಕನ್ಯಾನ: ದುಲ್ ಫುಖಾರ್ ಸೇವಾ ಟ್ರಸ್ಟ್ ವತಿಯಿಂದ ಬೃಹತ್ ಮೌಲಿದ್ ಮಜ್ಲಿಸ್ ಹಾಗೂ ಸಿಲ್ವರ್ ಜ್ಯುಬಿಲಿ ಪೋಸ್ಟರ್ ಬಿಡುಗಡೆ ಮತ್ತು ಸಾದಕರಿಗೆ ಸನ್ಮಾನ
ವಿಟ್ಲ: ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶವಾದ ಕನ್ಯಾನದಲ್ಲಿ 25 ವರ್ಷಗಳ ಹಿಂದೆ ಬೆರಳೆಣಿಕೆಯ ಕೆಲವು ಯುವಕರಿಂದ ಪ್ರಾರಂಭಗೊಂಡು ಇಂದು ಹೆಮ್ಮರವಾಗಿ ಬೆಳೆದು ನಿಂತಿರುವ ಬಡ ಮತ್ತು ಅನಾಥರ ಸೇವೆಯಲ್ಲಿ ಒಂದು ಹೆಜ್ಜೆ ಮುಂದೆ ಕಾರ್ಯಾಚರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದುಲ್ ಫುಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ ಮತ್ತು
ದುಲ್ ಫುಖಾರ್ ಗಲ್ಫ್ ಕಮಿಟಿ ಜಂಟಿ ಆಶ್ರಯದಲ್ಲಿ ಸರ್ವ ಲೋಕ ಜೀನ ಚರಾಚರಗಳಿಗೂ ಅನುಗ್ರಹವಾಗಿ ನಿಯೋಗಿಸಲ್ಪಟ್ಟ ಖಾತಿಮುನ್ನೆಬಿಯ್ಯಿನ್ ಮಹಮ್ಮದ್ ಮುಸ್ತಫ ರವರ 1500 ನೇ ಜನ್ಮ ದಿನದ ಪ್ರಯುಕ್ತ ಬೃಹತ್ ಮೌಲಿದ್ ಮಜ್ಲಿಸ್ ಆಗಸ್ಟ್ 29 ರ ಶುಕ್ರವಾರ ಕನ್ಯಾನ ಇಂಪೀರಿಯಲ್ ಫ್ಯಾಲೆಸ್ ನಲ್ಲಿ ನಡೆಯಿತು.
ಕಾಸರಗೋಡು ಜಿಲ್ಲೆಯ ಕುಂಬೋಲ್ ಮನೆತನದ ಅಸ್ಸಯ್ಯದ್ ಜಅಫರ್ ಸ್ಟಾದಿಕ್ ತಂಙಳ್ ಕುಂಬೋಲ್ ದುವಾ ನೇತೃತ್ವ ವಹಿಸಿ ಉಪದೇಶ ನಿರ್ದೇಶಗಳನ್ನು ನೀಡಿದರು.
ಸ್ಥಳೀಯ ಕನ್ಯಾನ ರಹ್ಮಾನಿಯಾ ಜುಮಾ ಮಸೀದಿಯ ಧರ್ಮಗುರು ಇಬ್ರಾಹಿಂ ಫೈಝಿ ಉಸ್ತಾದರು ಅಧ್ಯಕ್ಷತೆ ವಹಿಸಿ ನೆರೆಯ ಕುಕ್ಕಾಜೆ ಮಸೀದಿ ಖತೀಬ್ ಮುಹಮ್ಮದ್ ನಿಯಾಝ್ ಕಾಮಿಲ್ ಸಖಾಫಿ ಉದ್ಫಾಟಿಸಿದರು.
ಅದೇ ಸಮಯ ವೇದಿಕೆಯಲ್ಲಿದ್ದಂತಹ ಹಕೀಂ ಮದನಿ ಕರೋಪಾಡಿ, ಅಬ್ದುರ್ ಹಮೀದ್ ಸಖಾಫಿ ಪಾಡಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂಎಸ್ ಮೊಹಮ್ಮದ್, ಕನ್ಯಾನ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೆಪಿ ಅಬ್ದುಲ್ ರಹಿಮಾನ್, ಕನ್ಯಾನ ರಹ್ಮಾನಿಯಾ ಜಮಾಅತ್ ಪ್ರಸಿಡೆಂಟ್ ಬಿ ಇಸ್ಮಾಯಿಲ್ ಹಾಜಿ ಬಾಲ್ತ್ರೋಡಿ, ಕನ್ಯಾನ ಕುಕ್ಕಾಜೆ ಜಮಾಅತ್ ಆಡಳಿತ ಸಮಿತಿ ನೇತಾರರು ಮತ್ತು ಹಿರಿಯರೆಲ್ಲರೂ ಸೇರಿ ದುಲ್ ಫುಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ ಇದರ ಐತಿಹಾಸಿಕ ಸಿಲ್ವರ್ ಜ್ಯುಬಿಲಿ ಮಹಾ ಸಮ್ಮೇಳನದ ಪೋಸ್ಟರ್ ಬಿಡುಗಡೆ ಮಾಡಿದರು.
ಸುದೀರ್ಘ ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಅನನ್ಯ ಸೇವೆ ನೀಡಿದ ಜನಾಬ್ ಬಿ ಅಬ್ಬಾಸ್ ಹಾಜಿ ಬಂಡಿತ್ತಡ್ಕ, ಸಾವಿರಾರು ಮಕ್ಕಳ ಬಾಳಿಗೆ ಬೆಳಕಾದ ಅಬ್ದುಲ್ಲ ಮುಸ್ಲಿಯಾರ್ ನೆಕ್ಲಾಜೆ, ದಫ್ ಎಂಬ ಕಲೆಯನ್ನು ಬೆಳೆಸಿದ ಹುಸೈನ್ ಉಸ್ತಾದ್ ಸೆಟ್ಟಿಬೆಟ್ಟು, ಜೀವನವನ್ನೇ ಸೇವೆ ಯನ್ನಾಗಿಸಿದ ಜನಾಬ್ ಇಸ್ಮಾಯಿಲ್ ಮೂಡಾಯಿ ಮೂಲೆ, ಜನಾಬ್ ಕುಂಞಪ್ಪ ಹಾಜಿ ಕೇಪುಳಗುಡ್ಡೆ, ಜನಾಬ್ ಇದ್ದಿನಬ್ಬ ನೆಕ್ಲಾಜೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
“ಬಡ ಮತ್ತು ಅನಾಥರ ಬಾಳಿಗೆ ನನ್ನದೊಂದು ಪಾಲು” ಎಂಬ ದ್ಯೇಯ ವಾಕ್ಯದೊಂದಿಗೆ 2025- 27 ನೇ ಸಾಲಿನ ಸದಸ್ಯತ್ವ ಅಭಿಯಾನ ಕ್ಕೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.
ವೇದಿಕೆಯಲ್ಲಿ KS ಮದನಿ, ಖಾದರ್ ಸಅದಿ, ಅಶ್ರಫ್ ಮದನಿ, ಎಂಕೆ ಮುಹಮ್ಮದ್ ಕುಂಞ ಹಾಜಿ, ಮಾಲಿಕ್ ಅಮಾನಿ ಮುಂತಾದವರು ಉಪಸ್ಥಿತರಿದ್ದರು.




