ಕೊಡಂಗಾಯಿ: ದಾರುನ್ನಜಾತ್ 15ನೇ ವಾರ್ಷಿಕ ಹಾಗೂ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ 6ನೇ ಆಂಡ್ ನೇರ್ಚೆ
ವಿಟ್ಲ: ಟಿಪ್ಪು ನಗರ ಕೊಡಂಗಾಯಿ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಇದರ 15ನೇ ವಾರ್ಷಿಕ ಹಾಗೂ ಮರ್ಹೂಂ ಅಬೂಬಕ್ಕರ್ ಉಸ್ತಾದ್ 6 ನೇ ಆಂಡ್ ನೇರ್ಚೆ ನಡೆಯಿತು.
ಆ. 26 ರಂದು ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಮಹ್ಮೂದುಲ್ ಫೈಝಿ ವಾಲೆಮುಂಡೊವು ಉಸ್ತಾದ್ ನೆರವೇರಿಸಿದರು. ಅಸಯ್ಯದ್ ಪೂಕುಂಞಿ ತಂಙಳ್ ಮಕ್ಬರ ಝಿಯಾರತ್ ಪ್ರಾರ್ಥನೆಗೆ ನೇತೃತ್ವ ನೀಡಿ, ಸಂಜೆ ನಡೆದ ಸ್ನೇಹ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಭಾಗವಹಿಸಿದ ಅತಿಥಿಗಳನ್ನು ಸ್ವಾಗತಿಸಿದರು. ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ ಉದ್ಘಾಟಿಸಿದರು. ಸಂಸ್ಥೆ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸಖಾಫಿ ಮಾತನಾಡಿದರು.
ಖತ್ಮುಲ್ ಖುರ್ಆನ್ ಮಜ್ಲಿಸ್ ಅಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ಇವರ ನೇತೃತ್ವದಲ್ಲಿ ನಡೆಯಿತು. ನಂತರ ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮಹ್ಮೂದುಲ್ ಫೈಝಿ ವಹಿಸಿದ್ದರು. ಸಂಸ್ಥೆಯ ಮುದರ್ರಿಸ್ ಅಸಯ್ಯದ್ ಶಮೀಮ್ ತಂಙಳ್ ಟಿಪ್ಪು ನಗರ ಕಾರ್ಯಕ್ರಮ ಉದ್ಘಾಟಿಸಿದರು. ವಾಗ್ಮಿ ನೌಫಲ್ ಸಖಾಫಿ ಕಳಸ ಅನುಸ್ಮರಣೆ ಭಾಷಣ ಮಾಡಿದರು.
ಶೈಖುನಾ ಮುತ್ತಣ್ಣೂರು ತಂಙಳ್ ಮಾತನಾಡಿ ಪರಂಪರಾಗತವಾಗಿ ಬಂದಿರುವ ಇಸ್ಲಾಮಿನ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಜೀವನ ನಡೆಸಬೇಕು ಎಂದು ಹೇಳಿದರು.
ಕನ್ಯಾನ ಉಸ್ತಾದ್ ಇಬ್ರಾಹಿಂ ಫೈಝಿ ಮೊಹಮ್ಮದ್ ಅಲಿ ಸಖಾಫಿ ಅಶ್ಅರಿಯ್ಯ ಅಬೂಬಕ್ಕರ್ ಅತೀಫಿ, ಸುನ್ನಿ ಮಹಲ್ ಮಂಚಿ ಎಸ್ ಎಂ ಎ, ಸೌತ್ ಜಿಲ್ಲಾ ಅಧ್ಯಕ್ಷ ಯೂಸುಫ್ ಸಾಜ, ಅಬ್ದುಲ್ಲಾ ಮುಸ್ಲಿಯಾರ್ ದುಬೈ, ಎಂ ಎಸ್ ಮೊಹಮ್ಮದ್, ಉಸ್ಮಾನ್ ಸಖಾಫಿ, ಸ್ವಾಗತ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಕೀಂ, ಸುನ್ನಿ ಸಂಯುಕ್ತ ಜಮಾಅತ್ ಕೋಶಾಧಿಕಾರಿ ಅಬೂಬಕ್ಕರ್, ಮಜ್ಲಿಸ್ ದಾರುನ್ನಜಾತ್ ಅಧ್ಯಕ್ಷ ಅಬ್ದುಲ್ ಹಮೀದ್ ಸಖಾಫಿ, ಚಂದಪ್ಪ ರೈ ರಾದುಕಟ್ಟೆ, ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್ ಶೆಟ್ಟಿ, ಸಂದೇಶ್ ಶೆಟ್ಟಿ, ಹರೀಶ್, ಉಮೇಶ್ ಶೆಟ್ಟಿ, ಹಾಜಿ ಅಬ್ದುಲ್ ಹಕೀಂ ಕುಡ್ತಮುಗೇರು, ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ, ಡಾ ಹಸೈನಾರ್ ಟಿಪ್ಪು ನಗರ, ಕೆಎಂಜೆ ಅಧ್ಯಕ್ಷ ಇಬ್ರಾಹಿಂ ಮೋನು ಟಿಪ್ಪು ನಗರ, ಹಾಫಿಳ್ ಶರೀಫ್ ಸಖಾಫಿ ಉಕ್ಕುಡ, ಸುನ್ನಿ ಕೋರ್ಡಿನೇಷನ್ ಅಧ್ಯಕ್ಷ ಇಬ್ರಾಹಿಂ ಮದನಿ, ಅಬೂಬಕ್ಕರ್ ಸಿದ್ದೀಕ್ ಹರ್ಷದಿ, ಹಸೈನಾರ್ ಮುಸ್ಲಿಯರ್ ಬಾರೆಬೆಟ್ಟು, ವಿಟ್ಲ ಟೌನ್ ಇಮಾಮ್ ಅಬ್ಬಾಸ್ ಮದನಿ, ಅಬ್ದುಲ್ ಹಮೀದ್ ಸಖಾಫಿ ಬೊಂದೆಲ್, ಎಸ್ ವೈಎಸ್ ವಿಟ್ಲ ಝೋನ್ ಅಧ್ಯಕ್ಷರಾದ ರಹೀಂ ಸಖಾಫಿ, ಕೆಎಂಜೆ ವಿಟ್ಲ ಝೋನ್ ಅಧ್ಯಕ್ಷ ಉಸ್ಮಾನ್ ಹಾಜಿ ಟಿಪ್ಪು ನಗರ, ಅಬ್ದುಲ್ಲಾ ಹಾಜಿ ಕರೈ, ಕೆಬಿ ಶಿಹಬುದ್ದೀನ್ ಸಖಾಫಿ, ಹಾಫೀಳ್ ಶರೀಫ್ ಮುಸ್ಲಿಯಾರ್, ಅಬ್ಬಾಸ್ ಟಿಪ್ಪು ನಗರ, ಇಬ್ರಾಹಿಂ ಮುಸ್ಲಿಯಾರ್ ಟಿಪ್ಪು ನಗರ, ಮುಸ್ತಫ ಕೊಡಪದವು, ಹಸೈನಾರ್ ನೆಲ್ಲಿಗುಡ್ಡೆ, ಅಬೂಬಕ್ಕರ್ ಸೆರ್ಕಳ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಸಿನಾನ್ ಸಖಾಫಿ ಟಿಪ್ಪು ನಗರ, ಅಬ್ದುಲ್ ರಹ್ಮಾನ್ ಸಹದಿ, ಅಬೂಬಕ್ಕರ್ ಹಾಜಿ, ಅಬೂಬಕ್ಕರ್ ಹಾಜಿ ಹೊಸಂಗಡಿ, ಶಾಕಿರ್ ಅಳಕೆಮಜಲು, ಇಕ್ಬಾಲ್ ಶೀತಲ್ ವಿಟ್ಲ, ಉಮರ್ ವಿಟ್ಲ, ಅಬ್ಬಾಸ್ ಹಾಜಿ, ಮೊಹಮ್ಮದ್ ಮಾಣಿ, ಸಲೀಂ ಹಾಜಿ ಬೈರಿಕಟ್ಟೆ, ಲತೀಫ್ ಪರ್ತಿಪಾಡಿ ಯೂನುಸ್ ಸಹದಿ ಟಿಪ್ಪು ನಗರ, ಮಹಮ್ಮದ್ ಕುಂಞಿ, ಮಹಮ್ಮದ್ ಮುಸ್ಲಿಯಾರ್, ಖಾಸಿಂ ಮುಸ್ಲಿಯಾರ್, ಆದಮ್ ಹಾಜಿ ಅಬ್ದುಲ್ ಖಾದರ್ ಸಖಾಫಿ ಕಡಂಬು ಹಾಗೂ ಹಲವು ಧಾರ್ಮಿಕ ರಾಜಕೀಯ ಸಾಮಾಜಿಕ ಮುಖಂಡರು ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಜನರಲ್ ಕನ್ವೀನರ್ ಅಬ್ದುಲ್ ಖಾದರ್ ಫೈಝಿ ವಂದಿಸಿದರು. ಹಮೀದ್ ಹಾಜಿ ಕೊಡಂಗಾಯಿ ಸ್ವಾಗತಿಸಿದರು.




