February 1, 2026

ಸರಿಯಾಗಿ ಕೆಲಸ ಮಾಡು ಎಂದು ಹೇಳಿದ್ದಕ್ಕೆ ಕಾರ್ಕಳ ಮೂಲದ ಹೋಟೆಲ್ ಮಾಲಕನ ಕೊಲೆ

0
image_editor_output_image574856899-1756287642029.jpg

ಕಾರ್ಕಳ: ಸರಿಯಾಗಿ ಕೆಲಸ ಮಾಡು ಎಂದು ಹೇಳಿದ್ದಕ್ಕೆ ಕಾರ್ಕಳ ಮೂಲದ ಹೊಟೇಲ್ ಮಾಲೀಕನನ್ನು ಹೊಟೇಲ್ ಕಾರ್ಮಿಕ ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಹತ್ಯೆಯಾದವರು ಕಾರ್ಕಳ ತಾಲೂಕಿನ ಎಣ್ಣೆಹೊಳೆ ಕುಮೇರುಮನೆ ನಿವಾಸಿ ಸಂತೋಷ್ ಶೆಟ್ಟಿ (46) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ದಿಲೀಪ್ ಗಿರಿ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹೊಟೇಲ್ ಸಂತೋಷ್ ಶೆಟ್ಟಿ ಆರೋಪಿ ದಿಲೀಪ್ ಗೆ “ಕೆಲಸ ಸರಿಯಾಗಿ ಮಾಡು” ಎಂದು ಪದೇ ಪದೇ ಸೂಚಿಸಿದ್ದರು. ಗಿರಿ ಇತ್ತೀಚೆಗಷ್ಟೆ ಕೆಲಸಕ್ಕೆ ಸೇರಿದ್ದ, ಅಲ್ಲದೆ ಸಂತೋಷ್ ಶೆಟ್ಟಿ ಅವರಿಂದ ಮುಂಗಡವಾಗಿ 2,500 ರೂ.ಗಳನ್ನು ಪಡೆದಿದ್ದರು. ಅದಾದ ನಂತರ, ದಿಲೀಪ್ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಹೇಳಲಾಗಿದೆ. ಆದರೆ ಶೆಟ್ಟಿ “ಮೊದಲು ಕೆಲಸ ಸರಿಯಾಗಿ ಮಾಡು” ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *

error: Content is protected !!