ಎಸ್ ಡಿಪಿಐ ಮುಖಂಡ ಶಾನ್ ಹತ್ಯೆ ಪ್ರಕರಣ:
ಐವರು ಆರೆಸ್ಸೆಸ್ ಕಾರ್ಯಕರ್ತರ ಬಂಧನ
ಆಲಪ್ಪುಝ: ಆಲಪ್ಪುಝ ದಲ್ಲಿ ಎಸ್‌ಡಿಪಿಐ ಮುಖಂಡ ಶಾನ್ ಹತ್ಯೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಆರೋಪಿಗಳು ನೇರವಾಗಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಅತುಲ್, ಜಿಷ್ಣು, ಅಭಿಮನ್ಯು, ವಿಷ್ಣು ಮತ್ತು ಸನಂತ್ ಅವರನ್ನು ಕೇರಳ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಐವರು ಕೃತ್ಯ ಮಾಡಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ. ಬಂಧಿತರೆಲ್ಲರೂ ಆರೆಸ್ಸೆಸ್ ಕಾರ್ಯಕರ್ತರು ಎಂದು ಹೇಳಿದ್ದಾರೆ. ಆರೋಪಿಗಳ ಪೈಕಿ ಮೂವರನ್ನು ಅರೂರಿನಲ್ಲಿ ಬಂಧಿಸಲಾಗಿದೆ. ಉಳಿದ ಇಬ್ಬರನ್ನು ಕೈನಕರಿಯ ಮನೆಯೊಂದರಲ್ಲಿ ತಲೆಮರೆಸಿಕೊಂಡಿದ್ದು ಅಲ್ಲಿಂದ ಬಂಧಿಸಲಾಗಿದೆ.
ಶಾನ್ ಹತ್ಯೆ ಪ್ರಕರಣದಲ್ಲಿ ನೇರವಾಗಿ ಅಪರಾಧದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳುತ್ತಿರುವುದು ಇದೇ ಮೊದಲು. ಶಾನ್ ರವರನ್ನು ಕೊಲೆ ನಡೆಸಿದ ಗುಂಪು ಕಾರು ತ್ಯಜಿಸಿ ಆಂಬ್ಯುಲೆನ್ಸ್ ಬಿಟ್ಟು ತಪ್ಪಿಸಿಕೊಳ್ಳಲು ಆಂಬ್ಯುಲೆನ್ಸ್ ಸಿದ್ಧಪಡಿಸಿದ ಆರೋಪದ ಮೇಲೆ ಆರ್ ಎಸ್ ಎಸ್ ಕಾರ್ಯಕರ್ತನನ್ನು ಬಂಧಿಸಲಾಗಿತ್ತು. ಕಾರು ಆಯೋಜಿಸಿದ್ದ ರಾಜೇಂದ್ರ ಪ್ರಸಾದ್ ಮತ್ತು ರತೀಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಕಾರು ಕಣಿಚುಕುಲಂಗರ ದೇವಸ್ಥಾನದ ಬಳಿ ಪತ್ತೆಯಾಗಿತ್ತು.
ಈ ಹಿಂದೆಯೇ ಕೇರಳ ಪೊಲೀಸರಿಗೆ ಆರೋಪಿಗಳು ಜಿಲ್ಲೆ ಬಿಟ್ಟು ಹೋಗಿಲ್ಲ ಎಂಬುದು ಸ್ಪಷ್ಟವಾಗಿತ್ತು. ಇದರ ಆಧಾರದ ಮೇಲೆ ಜಿಲ್ಲೆಯಲ್ಲಿ ವ್ಯಾಪಕ ಶೋಧ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಕಾರಿನಲ್ಲಿ ಬಂದು ಕೊಲೆ ನಡೆಸಿ ಆಂಬುಲೆನ್ಸ್‌ನಲ್ಲಿ ಹತ್ತಿ ಪರಾರಿಯಾಗಿದ್ದಾರೆ. ಈ ಹಿಂದೆ ಆಂಬ್ಯುಲೆನ್ಸ್‌ನಿಂದ ಬಂಧಿಸಲ್ಪಟ್ಟಿದ್ದ ಅಖಿಲ್, ಕೊಲೆ ನಡೆಸಿದ ಆರೋಪಿಗಳು ಚೇರ್ತಲಾಗೆ ಹೋಗಿದ್ದರು ಎಂದು ಹೇಳಿದ್ದನು. ಇದರ ಆದಾರದ ಮೇಲೆ ತನಿಖೆಯು ನಡೆದಿತ್ತು.
ಆಲಪ್ಪುಳದ ಮನ್ನಂಚೇರಿಯಲ್ಲಿ ಎಸ್‌ಡಿಪಿಐ ಕಾರ್ಯಕರ್ತ ಶಾನ್ ಮೇಲೆ ಹಲ್ಲೆ ನಡೆದಿದ್ದು, ಶಾನ್ ಪ್ರಯಾಣಿಸುತ್ತಿದ್ದ ಬೈಕಿನ ಮೇಲೆ ಕಾರಿನಲ್ಲಿ ಬಂದ ತಂಡವು ದಾಳಿ ನಡೆಸಿದೆ. ಕೂಡಲೇ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ತುರ್ತು ಶಸ್ತ್ರ ಚಿಕಿತ್ಸೆ ನಡೆಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.





