August 6, 2026

ವಿಟ್ಲ: ಬೊಳಂತಿಮೊಗರು ಪ್ರೌಢಶಾಲಾ ಶಿಕ್ಷಕ ರಾಮಣ್ಣ ಗೌಡ ಅವರಿಗೆ ಬೀಳ್ಕೋಡುಗೆ ಸಮಾರಂಭ

0
IMG-20250816-WA0040

ವಿಟ್ಲ ಸರಕಾರಿ ಪ್ರೌಢಶಾಲೆ ಬೊಳಂತಿಮೊಗರು ಬಂಟ್ವಾಳ ತಾಲೂಕು ಇಲ್ಲಿ ರಾಮಣ್ಣ ಗೌಡ ಜಿ ಇವರು ಸುಮಾರು17 ವರ್ಷ ಗಳ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಅವರನ್ನು ಬೀಳ್ಕೋಡಲಾಯಿತು.

ಎಸ್ ಡಿ ಎಂ ಸಿ, ಶಿಕ್ಷಕ ರಕ್ಷಕ ಸಂಘ ಮತ್ತು ಶಿಕ್ಷಕರ ವತಿಯಿಂದ ಬೀಳ್ಕೊಡುಗೆ ಸಮಾರಂಭ ಶಾಲೆಯಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ರಾಮಣ್ಣ ಗೌಡ ಇವರು ಶಾಲೆಗೆ ಸುಮಾರು ಎರಡುವರೆ ಲಕ್ಷದ ವೆಚ್ಚದಲ್ಲಿ ಉದಾರ ಕೊಡುಗೆಯಾಗಿ ನೀಡಿದ ಬೋರ್ವೆಲ್ ಮತ್ತು ಪಂಪ್ ಸೆಟ್ ನ್ನು ಉದ್ಘಾಟಿಸಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷ ಮತ್ತು ಸದಸ್ಯರು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮತ್ತು ಸದಸ್ಯರು, ಶಿಕ್ಷಕರು ಮಕ್ಕಳು, ಪೋಷಕರು, ಹಿತೈಷಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!