ಪಿಎಸ್‌ಐ ಕೆ.ಕಾಳಿಂಗ ಪತ್ನಿ ಚೈತ್ರಾ ಆತ್ಮಹತ್ಯೆ
ಬಳ್ಳಾರಿ: ಪಿಎಸ್‌ಐ ಪತಿ ಹಾಗೂ ಇಬ್ಬರು ಮಕ್ಕಳನ್ನ ರೆಡಿ ಮಾಡಿ, ಧ್ವಜಾರೋಹಣಕ್ಕೆ ಕಳಿಸಿದ ಬಳಿಕ ಪಿಎಸ್‌ಐ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಮೋಕಾದಲ್ಲಿ ನಡೆದಿದೆ.
ಮೋಕಾ ಪೊಲೀಸ್ ಠಾಣೆಯ ಪಿಎಸ್‌ಐ ಕೆ.ಕಾಳಿಂಗ ಪತ್ನಿ ಚೈತ್ರಾ (36) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಸಹೋದರ ಹಾಗೂ ಇಬ್ಬರು ಸಹೋದರಿಯರ ಸಾವಿನಿಂದ ಚೈತ್ರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ರು ಎನ್ನಲಾಗಿದೆ.




