November 9, 2026

ಹಂದಿ ಹೊಡೆದೋಡಿಸಲೆಂದು ತಂದೆ ತಂದಿಟ್ಟಿದ್ದ ಸಿಡಿಮದ್ದು ಸ್ಪೋಟ: ಬಾಲಕ ದಾರುಣವಾಗಿ ಸಾವು

0
image_editor_output_image166539769-1794196868283

ಕಲಬುರಗಿ: ದೀಪಾವಳಿ ಹಬ್ಬದ ಸಂಭ್ರಮದ ವೇಳೆ ಹಚ್ಚಿದ ಸಿಡಿ ಮದ್ದು ಸಿಡಿದು ಬಾಲಕನ ತಲೆ ಛಿದ್ರಗೊಂಡು 15 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದಲ್ಲಿ ರವಿವಾರ ಸಂಭವಿಸಿದೆ.

ಕಾಡು ಹಂದಿಗಳಿಂದ ಬೆಳೆ ರಕ್ಷಿಸಲು ಬಳಸುವ ಸಿಡಿಮದ್ದನ್ನು ಹಬ್ಬದ ಸಂಭ್ರಮದಲ್ಲಿ ಪಟಾಕಿ ಎಂದು ಭಾವಿಸಿ ಹಚ್ಚಿದ್ದು ಸ್ಪೋಟಗೊಂಡು ಭೀಮರಾಯ ಎಂಬ ಬಾಲಕ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾನೆ.

ಬೆಂಕಿ ಹಚ್ಚಿದ ಕ್ಷಣಾರ್ಧದಲ್ಲಿ ಸಿಡಿಮದ್ದು ಸಿಡಿದ ತೀವ್ರತೆಗೆ ಬಾಲಕನ ರುಂಡ ಸಂಪೂರ್ಣವಾಗಿ ಛಿದ್ರ ಛಿದ್ರವಾಗಿದೆ. ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ದೃಶ್ಯ ಕಂಡು ಎಂತಹವರ ಹೃದಯ ಕಿತ್ತು ಬರುವಂತಿತ್ತು. ಕುಟುಂಬದವರ ಆಕ್ರಂದ್ರನ ಮುಗಿಲು ಮುಟ್ಟಿದೆ. ಸೇಡಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Leave a Reply

Your email address will not be published. Required fields are marked *

error: Content is protected !!