ಟ್ರಾಫಿಕ್ ಪೊಲೀಸರಿಗೆ ಅವಾಚ್ಯ ಅಶ್ಲೀಲ ಶಬ್ದಗಳಿಂದ ನಿಂದಿಸಿದ ಇಬ್ಬರ ಬಂಧನ
ಬೆಂಗಳೂರು:ಟ್ರಾಫಿಕ್ ಪೊಲೀಸರಿಗೆ ಸೊಂಟದ ಕೆಳಗಿನ ಪದಗಳನ್ನು ಬಳಸಿ ಅವಾಚ್ಯವಾಗಿ ಸಾರ್ವಜನಿಕವಾಗಿ ನಿಂದನೆ ಮಾಡಿದ್ದ ಹಿಂದಿ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಿನ್ನೆ ಬೆಂಗಳೂರಿನ ಯಲಹಂಕ ಬಳಿಕ ಶೇಷಾದ್ರಿ ಪುರಂ ಕಾಲೇಜು ಬಳಿ ಮಹಿಳೆ ಮತ್ತು ಆಕೆಯ ಸಹ ಸವಾರ ನೋ ಪಾರ್ಕಿಂಗ್ ಜಾಗದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದ್ದರು. ಇದನ್ನು ಗಮನಿಸಿದ ಬೆಂಗಳೂರು ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದರು. ಸಂಚಾರಿ ಪೊಲೀಸರು ಬೈಕ್ ಗೆ ವೀಲ್ ಕ್ಯಾಪ್ ಹಾಕಿದ್ದರು.
ಈ ವೇಳೆ ಇದನ್ನು ಪ್ರಶ್ನಿಸಿ ಸಂಚಾರಿ ಪೊಲೀಸರ ವಿರುದ್ಧವೇ ಮಹಿಳೆ ಹರಿಹಾಯ್ದಿದ್ದರು. ಮಹಿಳೆ ಕೂಗಾಡುವ ಭರದಲ್ಲಿ ಅಶ್ಲೀಲ ಸೊಂಟದ ಕೆಳಗಿನ ಪದಗಳನ್ನೇ ಉಪಯೋಗಿಸಿ ಮಹಿಳಾ ಟ್ರಾಫಿಕ್ ಸಿಬ್ಬಂದಿಗೆ ನಿಂದನೆ ಮಾಡಿದ್ದಳು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೇಳೆ ಪೊಲೀಸರು ಮಹಿಳೆ ಜೊತೆಗೆ ಕೆಲಸ ಮಾಡುತ್ತಿದ್ದ ಬೈಕ್ ಸವಾರನಿಗೆ ನೀವು ಈ ರೀತಿ ವರ್ತಿಸಿದರೆ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.




