“ನಾವು ಮಂಜುನಾಥ ಭಕ್ತರು, ಧರ್ಮಸ್ಥಳಕ್ಕೆ ಕಾಂಗ್ರೆಸ್ಸಿಗರೇ ಹೆಚ್ಚು ಹೋಗುತ್ತಾರೆ”: ಧರ್ಮಸ್ಥಳದಲ್ಲಿ ಹೂತಿಟ್ಟ ಶವದ ಕುರುಹು ಏನೂ ಸಿಗದಿದ್ದರೆ ಅನಾಮಿಕ ವ್ಯಕ್ತಿಯ ಮೇಲೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ
ರಾಮನಗರ: ಧರ್ಮಸ್ಥಳದಲ್ಲಿ ಅಸಹಜ ಸಾವು, ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಕಲಾಪದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರದ್ಧ ಕಿಡಿಕಾರಿದ್ದರು. ಎಸ್‌ಐಟಿ ರದ ಮಾಡುವಂತೆ ಒತ್ತಾಯಿಸಿದ್ದರು. ಇನ್ನು ಈ ಬಗ್ಗೆ ರಾಮನಗರದಲ್ಲಿ ರಾಮಲಿಂಗಾರೆಡ್ಡಿ ಮಾತನಾಡಿದ್ದಾರೆ.
ನಾವು ಮಂಜುನಾಥ ಭಕ್ತರು: ಧರ್ಮಸ್ಥಳಕ್ಕೆ ಕಾಂಗ್ರೆಸ್ಸಿಗರೇ ಹೆಚ್ಚು ಹೋಗುತ್ತಾರೆ. ಈ ಬಗ್ಗೆ ಸ್ಪಷ್ಟನೆ ಸಿಗಬೇಕು . ಸ್ಪಷ್ಟನೆ ಸಿಕ್ಕರೆ ಅಪಪ್ರಚಾರ ತಪ್ಪುತ್ತದೆ. ಯೂಟ್ಯೂಬರ್‌ಗಳು ತಮಗೆ ತೋಚಿದಂತೆ ಮಾತನಾಡುತ್ತಾರೆ. ಮಂಜುನಾಥನ ಭಕ್ತರು ಬಿಜೆಪಿಯವರಿಗಿಂತ ಕಾಂಗ್ರೆಸ್‌ನವರೇ ಹೆಚ್ಚು. ಈ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುವುದು ಸರಿಯಲ್ಲ. ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳನ್ನು ಈ ವಿಷಯದಲ್ಲಿ ಎಳೆದು ತರಬಾರದು. ಧರ್ಮಸ್ಥಳದಲ್ಲಿ ಹೂತಿಟ್ಟ ಶವದ ಕುರುಹು ಏನೂ ಸಿಗದಿದ್ದರೆ ಅನಾಮಿಕ ವ್ಯಕ್ತಿಯ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.




