November 10, 2026

ಕಾರ್ಕಳ: ರಸ್ತೆ ಬದಿಯ ಗೋಡೆಗೆ ಬೈಕ್ ಢಿಕ್ಕಿ: ಯುವಕ ಸಾವು

0
IMG-20261109-WA0327

ಶಿರ್ವ: ಕಾರ್ಕಳ- ಮೂಡುಬೆಳ್ಳೆ-ಉಡುಪಿ ರಾಜ್ಯ ಹೆದ್ದಾರಿಯ ಎಡ್ಮೇರು ಬಳಿ ಬೈಕೊಂದು ವಾಹನ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೋಡೆಗೆ (ಪಾಗಾರ)ಬಡಿದು ಬೈಕ್ ಸವಾರ ಶಿರ್ವ ಕಡಂಬು ನಿವಾಸಿ ಸುಕೇಶ್ ಆಚಾರ್ಯ (24) ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.

ಗಂಭೀರ ಗಾಯಗೊಂಡವರನ್ನು ಸ್ಥಳೀಯರು ಸೇರಿ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಯುವಕ ತಂದೆ ತಾಯಿ,ಸಹೋದರ,ಸಹೋದರಿಯನ್ನು ಅಗಲಿದ್ದಾರೆ. ಶಿರ್ವದ ಆಟೋ ಎಲೆಕ್ಟ್ರಿಕಲ್ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಅತ ಬೆಳಗ್ಗೆ ಅಂಗಡಿ,ವಾಹನ ಪೂಜೆ ಮುಗಿಸಿ ಮನೆಗೆ ತೆರಳಿದ್ದ ಎನ್ನಲಾಗಿದೆ.

ವಾಹನ ರಿಪೇರಿಗಾಗಿ ಯಾರದೋ ಕರೆ ಬಂದ ಹಿನ್ನೆಲೆಯಲ್ಲಿ ಮೂಡುಬೆಳ್ಳೆ ನಾಲ್ಕುಬೀದಿಗೆ ತೆರಳಿದ್ದ ಆತ ಅಲ್ಲಿಂದ ಮನೆಗೆ ತೆರಳುವ ವೇಳೆ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!