March 21, 2026

ಜಾಮೀನು ರದ್ದು: ಪವಿತ್ರಾ ಗೌಡರನ್ನು ಮನೆಯಿಂದಲೇ ಬಂಧಿಸಿದ ಪೊಲೀಸರು

0
image_editor_output_image-887795100-1755163047697.jpg

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣ ಹಿನ್ನೆಲೆ ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಅವರನ್ನು ಆ‌ರ್. ಆರ್. ನಗರದ ನಿವಾಸದಿಂದಲೇ ಪೊಲೀಸರು ಬಂಧಿಸಿದ್ದಾರೆ. ಗೋವಿಂದರಾಜನಗರ ಪೊಲೀಸರು ಪವಿತ್ರಾ ಗೌಡ ಅವರನ್ನು ಬಂಧಿಸಿದ್ದಾರೆ.

ಗುರುವಾರ (ಆ.14) ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮಹದೇವನ್ ಅವರ ವಿಭಾಗೀಯ ಪೀಠ ಗುರುವಾರ ದರ್ಶನ್ ಆ್ಯಂಡ್‌ ಗ್ಯಾಂಗ್‌ನ ಜಾಮೀನು ಅರ್ಜಿ ತೀರ್ಪು ಪ್ರಕಟಿಸಿದೆ.

ಇನ್ನು ಪ್ರಕರಣದ ಎ11 ನಾಗರಾಜ್ ಆಲಿಯಾಸ್ ನಾಗಾ, ಎ12 ಲಕ್ಷ್ಮಣ್ ಹಾಗೂ ಎ14 ಆರೋಪಿ ಪ್ರದೋಶ್ ಅವರನ್ನು ಕೂಡ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!