September 21, 2026

ನೆಲ್ಯಾಡಿ: ಕೆಎಸ್‌ಆರ್‌ಟಿಸಿ ಬಸ್‌ಗೆ ಸ್ವಿಫ್ಟ್‌ ಕಾರು ಢಿಕ್ಕಿ: ಕಾರಿನಲ್ಲಿದ್ದ ಓರ್ವ ಪ್ರಯಾಣಿಕನಿಗೆ ಗಂಭೀರ ಗಾಯ

0
image_editor_output_image-461669099-1754466486586.jpg

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ ೭೫ರ ಬಿ.ಸಿ.ರೋಡ್‌- ಅಡ್ಡಹೊಳೆಯ ಚತುಷ್ಪಥ ಕಾಮಗಾರಿಯ ಸಂದರ್ಭದಲ್ಲಿ ರಸ್ತೆ ನಿರ್ಮಾಣದ ಕಂಪೆನಿಯ ಅಧಿಕಾರಿಗಳ ಬೇಜವಾಬ್ಧಾರಿಯಿಂದ ನಡೆಯುವ ಅಪಘಾತ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ರಸ್ತೆ ವಿಭಜಕಕ್ಕೆ ನೀಡಿರುವ ಅವೈಜ್ಞಾನಿಕ ಸೂಚಕ ಫಲಕದಿಂದಾಗಿ ಇಂದು ಎಂಜಿರ ಸಮೀಪದ ಪರಕ್ಕಳ ಸೇತುವೆಯಲ್ಲಿ ನಡೆದ ಭೀಕರ ಅಪಘಾತ ಇದಕ್ಕೆ ನಿದರ್ಶನವೆಂಬಂತೆ ಇದೆ. ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಸ್ವಿಫ್ಟ್‌ ಕಾರು ನಡುವೆ ಇಂದು ಸಂಜೆ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಓರ್ವ ಪ್ರಯಾಣಿಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಒಂದೇ ದಿನ, ಒಂದೇ ತಿರುವು, ಏರಡು ಅಪಘಾತ
ಈ ಅಪಘಾತ ನಡೆಯುವ ಕೆಲಹೊತ್ತಿನ ಮುಂಚೆ ಇದೇ ಜಾಗದಲ್ಲಿ ಕಾರು ಮತ್ತು ಟೆಂಪೋ ವಾಹನಕ್ಕೆ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಈ ಜಾಗದಲ್ಲಿ ಕಳೆದ ಒಂದು ತಿಂಗಳಿನಲ್ಲಿ ಹತ್ತಕ್ಕಿಂತಲೂ ಹೆಚ್ಚು ಅಪಘಾತವಾಗಿರುವುದು ವರದಿಯಾಗಿದೆ.

ಗ್ರಾಮಸ್ಥರಿಂದ ಈಗಾಗಲೇ ಸಂಸದರು, ಹೆದ್ದಾರಿ ಪ್ರಾಧಿಕಾರಕ್ಕೆ ದೂರು
ರೆಖ್ಯ ಗ್ರಾಮದ ಪರಕ್ಕಳದಲ್ಲಿರುವ ಈ ಅಪಾಯಕಾರಿ ತಿರುವಿನ ಬಗ್ಗೆ ಈಗಾಗಲೇ ಗ್ರಾಮಸ್ಥರಿಂದ ಸಂಸದರು, ಜಿಲ್ಲಾಡಳಿತ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿಯಾಗಿ, ಅವರಿಗೆ ಮನವರಿಕೆ ಮಾಡಲಾಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!