7 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಪತಿ
ಉತ್ತರ ಪ್ರದೇಶ: 7 ತಿಂಗಳ ಗರ್ಭಿಣಿಯನ್ನ ಪತಿಯೇ ಕೊಲೆ ಮಾಡಿ ನಂತರ ಪೊಲೀಸರಿಗೆ ತಾನೇ ಮಾಹಿತಿ ನೀಡಿ ಪೊಲೀಸರು ಮನೆಗೆ ಬರುವ ವರೆಗೂ ಶವದ ಬಳಿಯೇ ಕಾಯುತ್ತಿದ್ದ ಭಯಾನಕ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನ ಸಪ್ಪಾ ಎಂದು ಗುರುತಿಸಲಾಗಿದ್ದು, ಕೌಟುಂಬಿಕ ಕಲಹಕ್ಕೆ ಪತಿ ರವಿಶಂಕರ್ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಜನವರಿಯಲ್ಲಿ ವಿವಾಹವಾದ ರವಿ ಮತ್ತು ಸಪ್ನಾ ನಡುವೆ ಇತ್ತೀಚೆಗೆ ಕೌಟುಂಬಿಕ ಕಲಹ ನಡೆಯುತ್ತಿತ್ತು.
ಆದರೆ ರವಿ ಆಕೆಯ ತಂಗಿಯ ಮನೆಗೆ ಹೋಗಿ, ಮಾತನಾಡುವ ನೆಪದಲ್ಲಿ ಮೊದಲ ಮಹಡಿಗೆ ಕರೆದುಕೊಂಡು ಹೋಗಿ ಕೊಠಡಿಯಲ್ಲಿ ಬೀಗ ಹಾಕಿದ್ದ. ಬಳಿಕ ಮನೆಯೊಳಗಿಂದ ಕಿರುಚಾಟ ಕೇಳಿಬಂದಿದೆ. ಸಪ್ನಾ ಜೀವ ಉಳಿಸಿಕೊಳ್ಳಲು ಪತಿಯನ್ನ ಎಷ್ಟೇ ಬೇಡಿಕೊಂಡರೂ ಆತ ಕರುಣೆ ತೊರದೇ ಪತ್ನಿಯನ್ನು ಗಂಟಲು ಸೀ*ಳಿ ಕೊ*ಲೆ ಮಾಡಿದ್ದಾನೆ.




