March 13, 2026

ಮಂಗಳೂರು: ಬಿಜೈ ಭಾರತಿ ಬಿಲ್ಡರ್ಸ್ ಕಚೇರಿ ಮೇಲೆ ರವಿ ಪೂಜಾರಿ ಸಹಚರರಿಂದ ಶೂಟೌಟ್ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

0
image_editor_output_image-261905298-1753628618519

ಮಂಗಳೂರು: ಉರ್ವಾ ಪೊಲಿಸ್ ಠಾಣಾ ವ್ಯಾಪ್ತಿಯ ಬಿಜೈ ಭಾರತಿ ಬಿಲ್ಡರ್ಸ್ ಕಛೇರಿಗೆ ಭೂಗತ ಪಾತಕಿ ರವಿ ಪೂಜಾರಿ ಸಹಚರರು ನಡೆಸಿದ ಶೂಟ್ ಟ್ ಗೆ ಸಂಬಂದಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ

ಪ್ರಕರಣದ ಆರೋಪಿಯಾಗಿದ್ದ, ಮಹಾರಾಷ್ಟ್ರ ಕರಾಡ್ ಗಣೇಶ್ ಲಕ್ಷ್ಮಣ್ ಸಕಟ್ ಈತನು ನ್ಯಾಯಾಲಯಕ್ಕೆ ಹಾಜರಾಗದೆ 2015 ರಿಂದ ತಲೆ ಮರೆಸಿಕೊಂಡಿದ್ದು. ಈತನ ವಿರುದ್ದ ಮಾನ್ಯ ಜೆಎಂಎಫ್ ಸಿ 3ನೇ ನ್ಯಾಯಾಲಯ ಮಂಗಳೂರು ವಾರಂಟ್ ಹೊರಡಿಸಿದ್ದು, ಈತನನ್ನು ಮಹಾರಾಷ್ಟ್ರ ರಾಜ್ಯದ ಪಂಡರಾಪುರ ಎಂಬಲ್ಲಿ, ಮಾನ್ಯ ಪೊಲೀಸ್ ಆಯುಕ್ತರ ಮಾರ್ಗದರ್ಶನದಂತೆ ಉರ್ವಾ ಪೊಲೀಸ್ ಠಾಣಾ ನಿರೀಕ್ಷಕರ ತಂಡ ಎಎಸ್ಐ ವೇಣುಗೋಪಾಲ್, ಸಿಬ್ಬಂಧಿಗಳಾದ ಹೆಚ್ ಸಿ 949 ಪ್ರಮೋದ್, ಹೆಚ್ ಸಿ 956 ನಾರಾಯಣ, ಹೆಚ್ ಸಿ 622 ಗೋವಿಂದರಾಜ್ ರವರು ದಸ್ತಗಿರಿ ಮಾಡಿ ದಿನಾಂಕ 27.07.2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಈತನು ಕಾವುರು ಪೊಲೀಸು ಠಾಣಾ ಅಪರಾಧ ಕ್ರಮಾಂಕ 44/2014 ಕಲಂ: 448, 507, 120(ಬಿ) ಜೊತೆಗೆ 34 IPC ಪ್ರಕರಣದಲ್ಲಿಯೂ ಆರೋಪಿಯಾಗಿದ್ದು, ಆತನ ವಿರುದ್ದ ನ್ಯಾಯಾಲಯವು ವಾರಂಟ್ ಹೊರಡಿಸಿರುತ್ತದೆ. ಮತ್ತು ಈತನ ವಿರುದ್ದ ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆ ಕರಾಡ್ ನಲ್ಲಿಯೂ ಆರ್ಮ್ಸ ಆ್ಯಕ್ಟ್ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!