September 22, 2026

ಶಾಸಕ ಕೆಎಂ  ಶಿವಲಿಂಗೇಗೌಡರಿಗೆ  ಸಚಿವ ಸ್ಥಾನ ನೀಡುವಂತೆ ಒತ್ತಾಯ: ಸಿಟ್ಟಾಗಿ ಅರ್ಧಕ್ಕೆ ಭಾಷಣ ನಿಲ್ಲಿಸಿ ಹೊರಟ ಸಿಎಂ

0
image_editor_output_image-732610605-1753604906415

ಅರಸೀಕೆರೆ: ಸಿಎಂ ಸಿದ್ದರಾಮಯ್ಯ ಭಾಷಣದ ನಡುವೆ    ಶಾಸಕಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವಂತೆ ಕಾರ್ಯಕರ್ತರು, ಅಭಿಮಾನಿಗಳು ಘೋಷಣೆ ಕೂಗಿದ್ದರಿಂದ ಸಿಟ್ಟಾದ ಸಿಎಂ ಸಿದ್ದರಾಮಯ್ಯ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ವೆದಿಕೆ ತೆರಲಿದ ಘಟನೆ ನಡೆಯಿತು.

ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದ ವೇಳೆ ಕೆಲವರು ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವಂತೆ ಶಿವಲಿಂಗೇಗೌಡರ ಪರ ಗೋಷಣೆ ಕೂಗಲು ಆರಂಭಿಸಿದರು.

 

ಈ ವೇಳೆ ಕಾರ್ಯಕರ್ತರನ್ನು ಕುಳಿತುಕೊಳ್ಳುವಂತೆ ಸಿಎಂ ಮನವಿ ಮಾಡಿದರೂ ಘೋಷಣೆ ಕೂಗುವುದನ್ನು ನಿಲ್ಲಿಸದ ಕಾರಣ ಸಿಟ್ಟಾದ ಸಿಎಂ ಸಿದ್ದರಾಮಯ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ವೆದಿಕೆಯತ್ತ ನಡೆದರು. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಶಿವಲಿಂಗೇಗೌಡ ಹಾಗು ಸಂಸದ ಶ್ರೇಯಸ್‌ ಪಟೇಲ್ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಸಿಎಂ ಸಿದ್ದರಾಮಯ್ಯ ಅವರನ್ನು ಭಾಷಣ ಮುಂದುವರೆಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.


ಬಳಿಕ ಮಾತನಾಡಿದ ಸಿದ್ದರಾಮಯ್ಯ, ಶಿವಲಿಂಗೇಗೌಡರು ಮಂತ್ರಿಯಾಗಲು ಎಲ್ಲಾ ಅಹರ್ತೆ ಹೊಂದಿದ್ದಾರೆ. ನೀವು ಕೂಡ ಅವರ ವ್ಯಕಿತ್ವ ಗುರುತಿಸಿ ನಾಲ್ಕು ಬಾರಿ ಗೆಲ್ಲಿಸಿದ್ದೀರಿ ಇದನ್ನು ಬಹಿರಂಗವಾಗಿ ಚರ್ಚಿಸಲು ಸಾದ್ಯವಿಲ್ಲ. ನಿಮ್ಮ ಪ್ರೀತಿ ಅಭಿಮಾನ ಅವರ ಮೇಲೆ ಹಿಗೆಯೇ ಇರಲಿ ಮುಂದೆಯೂ ಅವರು ಗೆದ್ದು ಬರಲಿ ಎಂದರು.

Leave a Reply

Your email address will not be published. Required fields are marked *

You may have missed

error: Content is protected !!