September 22, 2026

ವಿಟ್ಲ; ಹೊರೈಝನ್ ಶಾಲೆ, ಶಿಕ್ಷಕ – ರಕ್ಷಕ ಸಭೆ

0
image_editor_output_image-734457647-1753596160374

ವಿಟ್ಲ: ಹೊರೈಝನ್ ಪಬ್ಲಿಕ್ ಸ್ಕೂಲ್ ನ ಶಿಕ್ಷಕ – ರಕ್ಷಕ ಸಭೆಯು ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಶಾಲೆಯ ಕಾರ್ಯದರ್ಶಿ ನೋಟರಿ ಅಬೂಬಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.


ಈ ಸಂದರ್ಭ ಮಾತನಾಡಿದ ಅವರು” ಮನೆಯಲ್ಲಿ ಪೋಷಕರು ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವುದರೊಂದಿಗೆ ಕಲಿಕೆಗೆ ಉತ್ತೇಜನ ನೀಡಬೇಕು.ಶಾಲೆಯಲ್ಲಿ ಮೌಲ್ಯಾಧಾರಿತ  ಶಿಕ್ಷಣ ದೊರೆಯಬೇಕಾದರೆ ಪೋಷಕರ ಸಹಕಾರವೂ ಅಗತ್ಯ ” ಎಂದು ಹೇಳಿದರು.
ಸದರ್ ಉಮ್ಮರ್ ಸ‌ಅದಿ ದುವಾ ನೆರವೇರಿಸಿದರು.
ಟ್ರಸ್ಟಿ ಹಮೀದ್ ಬದ್ರಿಯಾ, ಜೊತೆ ಕಾರ್ಯದರ್ಶಿ,ಇಕ್ಬಾಲ್ ಹಳೆಮನೆ ಮಸೀದಿಯ ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಮದರಸ ಶಿಕ್ಷಕ ಅಬ್ದುಲ್ ಲತೀಫ್ ಹನೀಫಿ ಮುಂತಾದವರು ಭಾಗವಹಿಸಿದ್ದರು.

 


ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಪ್ರಾಸ್ತಾವಿಕ ಭಾಷಣ ಮಾಡಿದರು.
ಉಪ ಮುಖ್ಯ ಶಿಕ್ಷಕಿ ಗಾಯತ್ರಿ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!