ಪೊಲೀಸ್ ವಾಹನ ಡಿವೈಡರ್‌ಗೆ ಢಿಕ್ಕಿ: ಇಬ್ಬರು ಡಿಎಸ್ಪಿ ಅಧಿಕಾರಿಗಳು ಸಾವು
ಹೈದರಾಬಾದ್: ತೆಲಂಗಾಣದ ಯಾದಾದ್ರಿಯಲ್ಲಿ ಪೊಲೀಸ್ ವಾಹನವೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಡಿಎಸ್ಪಿ ಅಧಿಕಾರಿಗಳು ಸಾವನ್ನಪ್ಪಿದ್ದು, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ಡಿಎಸ್ಪಿಗಳಾದ ಚಂದ್ರಕರ್ ರಾವ್ ಮತ್ತು ಶಾಂತಾ ರಾವ್‌ರನ್ನು ಮೃತರೆಂದು ಗುರುತಿಸಲಾಗಿದೆ. ಎಎಸ್ಪಿ ಪ್ರಸಾದ್ ಮತ್ತು ಹೆಡ್ ಕಾನ್‌ಸ್ಟೇಬಲ್ ನರಸಿಂಗ್ ರಾವ್ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.





