September 22, 2026

ಕೇರಳ: ಜೈಲಿನಿಂದ ತಪ್ಪಿಸಿಕೊಂಡ ಅತ್ಯಾಚಾರ ಆರೋಪಿ ಕೆಲವೇ ಗಂಟೆಗಳಲ್ಲಿ ಬಂಧನ: ಬಾವಿಯಲ್ಲಿ ಅಡಗಿ ಕೂತಿದ್ದ ಆರೋಪಿ

0
image_editor_output_image-37496960-1753433895492.jpg

ಕಣ್ಣೂರು: 2011ರ ಕೇರಳದ ಸೌಮ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿ ಗೊವಿಂದಚಾಮಿ ಕಣ್ಣೂರು ಕೇಂದ್ರ ಜೈಲಿನಿಂದ ತಪ್ಪಿಸಿಕೊಂಡ ಕೆಲವೇ ಗಂಟೆಗಳಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಕಣ್ಣೂರು ನಗರ ವ್ಯಾಪ್ತಿಯ ಥಲಾಪ್‌ನಲ್ಲಿರುವ ಪಾಳುಬಿದ್ದ ಕಟ್ಟಡದ ಸಮೀಪ ಆತನನ್ನು ಸೆರೆಹಿಡಿಯಲಾಗಿದೆ. ಆತ ಕಟ್ಟಡದ ಸಮೀಪ ಇದ್ದ ಬಾವಿಯಲ್ಲಿ ಅಡಗಿ ಕುಳಿತಿದ್ದ ಎಂದು ತಿಳಿದು ಬಂದಿದೆ.

 

2011ರ ಫೆಬ್ರವರಿ 1ರಂದು ಎರ್ನಾಕುಲಂನಿಂದ ಶೋರನೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದಾಗ ಮಂಜಕ್ಕಾಡ್ ನಿವಾಸಿ 23ರ ಹರೆಯದ ಸೌಮ್ಯಾ ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಗೊವಿಂದಚಾಮಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ.

Leave a Reply

Your email address will not be published. Required fields are marked *

You may have missed

error: Content is protected !!